ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲ: ತಮ್ಮನಿಂದಲೇ ಅಣ್ಣನ ಕೊಲೆ : ಮದ್ಯದ ಅಮಲಿನಲ್ಲಿ ನಡೆಯಿತು ಕೃತ್ಯ ಸ್ಥಳಕ್ಕೆ ASP ಭೇಟಿ

ವಿಟ್ಲ: ಕುಡಿದ ಮತ್ತಿನಲ್ಲಿ ತಮ್ಮನೇ ಅಣ್ಣನನ್ನು ಹೊಡೆದು ಕೊಲೆ ಮಾಡಿದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ವಿಟ್ಲ ಪಡ್ನೂರು ಗ್ರಾಮದ ಕೊಡಂಗೆಯಲ್ಲಿ ನಡೆದಿದೆ. ಸದ್ಯ ಘಟನಾ ಸ್ಥಳಕ್ಕೆ ಎಎಸ್ಪಿ ಕುಮಾರ ಚಂದ್ರರವರು ಭೇಟಿ ನೀಡಿದ್ದಾರೆ.

ವಿಟ್ಲ ಪಡ್ನೂರು ಗ್ರಾಮದ ಕೊಡಂಗೆ ದಿ. ಸೀನಪ್ಪ ದೇವಾಡಿಗರವರ ಪುತ್ರ ಗಣೇಶ್ ಬಂಗೇರ(54) ಮೃತ ದುರ್ದೈವಿಯಾಗಿದ್ದಾರೆ. ಮೃತರ ಸಹೋದರ ಪದ್ಮನಾಭ ಬಂಗೇರ ಆರೋಪಿಯಾಗಿದ್ದಾರೆ.

ಸಹೋದರರಿಬ್ಬರಿರೂ ತಾಯಿ ಕಮಲರವರೊಂದಿಗೆ ವಿಟ್ಲ ಪಡ್ನೂರು ಗ್ರಾಮದ ಕೊಡಂಗೆಯಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದರು. ಸೆ.13ರ ತಡರಾತ್ರಿ ಕುಡಿತದ ಮತ್ತಿನಲ್ಲಿ ತಮ್ಮ ಪದ್ಮನಾಭ ಬಂಗೇರ ಗಣೇಶ ಬಂಗೇರರವರನ್ನು ಯಾವುದೋ ಆಯುಧ ಬಳಸಿ ಕೊಲೆಗೈದಿರಯವುದಾಗಿ ಮೃತರ ಸಹೋದರಿ ಆರೋಪಿಸಿದ್ದಾರೆ. ಬೆಳಗ್ಗೆ ತಾಯಿ ಪೋನ್ ಮಾಡಿ ಗಣೇಶ ಬಂಗೇರರವರು ಮಲಗಿದಲ್ಲೇ ಇದ್ದಾರೆ ಮಾತನಾಡುವುದಿಲ್ಲ ಎಂದು ತಿಳಿಸಿದ್ದು, ಬಳಿಕ ನಾನು ಹಾಗೂ ಅಕ್ಕನ ಮಗ ತಾಯಿ ಮನೆಗೆ ಬಂದು ನೋಡಿದಾಗ ಅವರು ಮೃತಪಟ್ಟ ಸ್ಥಿತಿಯಲ್ಲಿದ್ದರು ಎಂದು ಮೃತರ ಸಹೋದರಿ ತಿಳಿಸಿದ್ದಾರೆ.

ಸಹೋದರರಿಬ್ಬರು ವಿವಾಹಿತರಾಗಿದ್ದರೂ ಪತ್ನಿಯರನ್ನು ತೊರೆದಿದ್ದರೆಂದು ಸಂಬಂಧಿಕರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಎಎಸ್ಪಿ ಕುಮಾರ ಚಂದ್ರರವರು ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

Edited By : Manjunath H D
Kshetra Samachara

Kshetra Samachara

14/09/2022 05:19 pm

Cinque Terre

7.49 K

Cinque Terre

1

ಸಂಬಂಧಿತ ಸುದ್ದಿ