ಕುಂದಾಪುರ: ಬೆಂಗಳೂರು-ಕುಂದಾಪುರ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ ಚಾಲಕನೊಬ್ಬ ನಡುರಸ್ತೆಯಲ್ಲಿ ಬಸ್ ನಿಲ್ಲಿಸಿ ಟೈಟಾಗಿ ಬಿದ್ದ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉಡುಪಿಯ ಮೂಲದ್ದೆನ್ನಲಾದ ಭಾರತಿ ಎಂಬ ಹೆಸರಿನ ಬಸ್‌ನ ಚಾಲಕನೇ ಕುಡಿದು ಅಮಲೇರಿಸಿಕೊಂಡು ರಸ್ತೆ ಮಧ್ಯೆ ಬಿದ್ದ ವಿಡಿಯೋದ ವಿಲನ್ ಆಗಿದ್ದಾನೆ. ಮೊದಲೇ ಕುಡಿದು ಚಾಲನೆ ಮಾಡಿಕೊಂಡು ಬಂದಿದ್ದ ಚಾಲಕ ಬಸ್ ಅನ್ನು ಮಧ್ಯರಾತ್ರಿ ರಸ್ತೆ ಮಧ್ಯೆ ವಿರಾಮಕ್ಕೆಂದು ನಿಲ್ಲಿಸಿದ್ದ ಎನ್ನಲಾಗಿದೆ. ಈ ಸಂದರ್ಭ ಮತ್ತೆ ಕುಡಿದಿದ್ದು ದೇಹದ ನಿಯಂತ್ರಣ ಕಳೆದುಕೊಂಡಿದ್ದಾನೆ. ಅಲ್ಲದೇ ಓಲಾಡುತ್ತಾ ಮತ್ತೆ ಬಸ್ ಬಳಿ ಬಂದು ಚಾಲನೆಗಾಗಿ ಪ್ರಯತ್ನಿಸಿದ್ದಾನೆ. ಈ ಸಂದರ್ಭ ಗಮನಿಸುತ್ತಿದ್ದವರ ಪೈಕಿ ಒಬ್ಬ ಕುಡಿದು ಟೈಟಾಗಿದ್ದ ಚಾಲಕನಿಗೆ ಹೊಡೆದಿದ್ದಾನೆ. ಮೊದಲೇ ದೇಹದ ನಿಯಂತ್ರಣ ಕಳೆದುಕೊಂಡಿದ್ದ ಚಾಲಕ ಹೆದ್ದಾರಿ ನಡುವೆಯೇ ಬಿದ್ದಿದ್ದಾನೆ. ಈ ಘಟನೆಯನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದು ವೈರಲ್ಲಾಗುತ್ತಿದೆ. ಆದರೆ ಚಾಲಕನ ಹೆಸರಾಗಲೀ, ಬಸ್ ಯಾವ ಎಲ್ಲಿಂದ ಎಲ್ಲಿಗೆ ಹೊರಟಿತ್ತು ಎನ್ನುವ ಮಾಹಿತಿ ಲಭ್ಯವಾಗಿಲ್ಲ.
PublicNext
14/09/2022 11:34 am