ಉಡುಪಿ: ನಗರದ ಕುಂಜಿಬೆಟ್ಟುವಿನ ಮನೆಗೆ ಸೆ.9ರಂದು ರಾತ್ರಿ ನುಗ್ಗಿದ ಕಳ್ಳರು ದೇವರ ಕೋಣೆಯಲ್ಲಿದ್ದ ಬೆಳ್ಳಿಯ ದೇವರ ಪೀಠ, ಬೆಳ್ಳಿಯ ಸಣ್ಣ ತಟ್ಟೆ, ಬೆಳ್ಳಿಯ ಅರಶಿನ ಕುಂಕುಮ ಬೌಲ್, ಬೆಳ್ಳಿಯ ಸಣ್ಣ ಕುಂಕುಮ ಕರಡಿಗೆ, ಬೆಳ್ಳಿಯ ಗಣಪತಿ ಪೀಠ ಸೇರಿ ಒಟ್ಟು 845 ಗ್ರಾಂ ತೂಕದ ಬೆಳ್ಳಿ ಸಾಮಗ್ರಿ ಕಳವು ಮಾಡಿದ್ದಾರೆ. ಕಳವಾದ ಸೊತ್ತುಗಳ ಮೌಲ್ಯ 64000 ರೂ. ಎಂದು ಅಂದಾಜಿಸಲಾಗಿದೆ.
ಇಲ್ಲಿನ ಸುರಾಲು ನಾರಾಯಣ ಮಡಿ ಎಂಬವರು ಕುಟುಂಬ ಸಮೇತ ನೇಪಾಳಕ್ಕೆ ಪ್ರವಾಸ ಹೋಗಿದ್ದು, ಈ ಸಮಯಲ್ಲಿ ಮನೆಯ ಮುಖ್ಯದ್ವಾರದ ಬಾಗಿಲು ಮುರಿದು ಒಳಪ್ರವೇಶಿಸಿದ ಕಳ್ಳರು ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
Kshetra Samachara
11/09/2022 09:59 am