ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಜಾಗದ ವಿಷಯದಲ್ಲಿ ತಕರಾರು: ತಾಯಿ, ಮಗನ ಮೇಲೆ ಹಲ್ಲೆ

ಮೂಡುಬಿದಿರೆ: ಜಾಗದ ವಿಷಯದಲ್ಲಿ ತಕರಾರು ಉಂಟಾಗಿ ಮಾತಿಗೆ ಮಾತು ಬೆಳೆದು ಮಹಿಳೆ ಮೇಲೆ ಹಲ್ಲೆ ನಡೆದ ಘಟನೆ ಶುಕ್ರವಾರ ತಡರಾತ್ರಿ ಪಡುಮಾರ್ನಾಡುವಿನ ಬನ್ನಡ್ಕದ ಕಲ್ಲೊಟ್ಟುವಿನಲ್ಲಿ ನಡೆದಿದೆ.

ಪಡುಮಾರ್ನಾಡುವಿನ ಶಕುಂತಲಾ ಹೆಗ್ಡೆ ಅವರು ತಮ್ಮ ಕುಮ್ಕಿ ಜಾಗದಲ್ಲಿ ಗಿಡ ನೆಡಲು ಮುಂದಾಗಿದ್ರು., ಇದನ್ನು ವಿರೋಧಿಸಿದ ಹರೀಶ್ ಹೆಗ್ಡೆ ಅದು ತಮ್ಮ ಜಾಗವೆಂದು ಶಕುಂತಲಾ ಹೆಗ್ಡೆ ಜೊತೆ ಮಾತಿಗೆ ಇಳಿದಿದ್ದಾರೆ. ಕೊನೆಗೆ ಮಾತಿಗೆ ಮಾತು ಬೆಳೆದು ಹಲ್ಲೆ ನಡೆಸಿದ್ದಾರೆ ಎಂದು ಶಕುಂತಲಾ ಮಾಧ್ಯಮದ ಮೂಲಕ ತಿಳಿಸಿದ್ದಾರೆ.

ಶಕುಂತಲಾ ಹೆಗ್ಡೆ ಅವರ ಮಗ ಸಂಜಯ್ ಹೆಗ್ಡೆ ಈ ಕುರಿತು ಮಾಹಿತಿ ನೀಡಿ ಘಟನೆ ನಡೆಯುವ ಸಂದರ್ಭದಲ್ಲಿ ಪೊಲೀಸ್ ನವರ ಭದ್ರತೆ ಪಡೆದು ತನ್ನನ್ನು ಹಿಡಿದಿಟ್ಟು ತನ್ನ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.

Edited By : Shivu K
Kshetra Samachara

Kshetra Samachara

10/09/2022 04:24 pm

Cinque Terre

10.52 K

Cinque Terre

1

ಸಂಬಂಧಿತ ಸುದ್ದಿ