ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಎರಡು ಕಡೆ ಇಸ್ಪೀಟು ,ಮಟ್ಕಾ ಅಡ್ಡೆಗೆ ದಾಳಿ: 8 ಮಂದಿ ವಶಕ್ಕೆ

ಕಾಪು : ಕುಂದಾಪುರ ಮತ್ತು ಕಾಪು ಠಾಣಾ ವ್ಯಾಪ್ತಿಯಲ್ಲಿ ಮಟ್ಕಾ ಹಾಗೂ ಇಸ್ಪೀಟು ಜುಗಾರಿ ಅಡ್ಡೆಗೆ ದಾಳಿ ನಡೆಸಿರುವ ಪೊಲೀಸರು 8 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮಟ್ಕಾ ಜುಗಾರಿ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಕಾಪು ಪೊಲಿಸರು, ಏಣಗುಡ್ಡೆ ಗ್ರಾಮದ ಬೇಕರಿಯೊಂದರ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಚೀಟಿ ಬರೆಯುತ್ತಿದ್ದ ಮೊಹಮ್ಮದ್ ಆಸಿಫ್ ಎಂಬಾತನನ್ನು ಹಾಗೂ ಮೂಡಬೆಟ್ಟು ಗ್ರಾಮದ ನವರಂಗ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಜನಾರ್ಧನ ಎಂಬವನನ್ನು ವಶಕ್ಕೆ ಪಡೆದು ಇಬ್ಬರಿಂದ ಕ್ರಮವಾಗಿ 850 ರೂ. ಹಾಗೂ 770 ರೂ. ನಗರದನ್ನು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕುಂದಾಪುರ ಬನ್ನೂರು ಗ್ರಾಮದ ಬಾರ್ ವೊಂದರ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟು ಇಸ್ಪೀಟು ಜುಗಾರಿ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಕುಂದಾಪುರ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ ಇಸ್ಪೀಟು ಜುಗಾರಿ ನಿರತರಾಗಿದ್ದ ನವೀನ, ಸಚಿನ್, ಶ್ರೀನಾಥ, ವಸಂತ್, ಶ್ರೀಧರ, ಸುಕೇಶ ಎಂಬವರನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ 5,150 ರೂ. ನಗದು ಹಾಗೂ ಆಟಕ್ಕೆ ಬಳಸಿದ ಇತರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
Kshetra Samachara

Kshetra Samachara

09/09/2022 02:23 pm

Cinque Terre

6.68 K

Cinque Terre

0

ಸಂಬಂಧಿತ ಸುದ್ದಿ