ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ನಗ- ನಗದು ಅಪಹರಣ; ಮನೆಗಳ್ಳ ಮೊವಾಜ್ ಬಂಧನ; ಚೋರನ ಕರಾಮತ್ತು ಸಿಸಿ ಟಿವಿಯಲ್ಲಿ ಸೆರೆ

ಉಳ್ಳಾಲ: ಸೋಮೇಶ್ವರ ಬೀಚ್ ಬಳಿಯ ಹೋಂ ಸ್ಟೇ ಒಂದಕ್ಕೆ ನಿನ್ನೆ ಸಂಜೆ ಕನ್ನ ಹಾಕಿದ್ದ ಕಳ್ಳನ ಕರಾಮತ್ತು ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ಉಳ್ಳಾಲ ಠಾಣಾ ವ್ಯಾಪ್ತಿಯ ಎರಡು ಮನೆಗಳಿಂದ ನಗ, ನಗದು ದೋಚಿದ್ದ ಕಳ್ಳನನ್ನ ಉಳ್ಳಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ಮೊವಾಝ್ (35) ಬಂಧಿತ ಖದೀಮ.

ಆರೋಪಿ ಮೊವಾಝ್ ಕೇರಳದ ಕಣ್ಣೂರಿನ ಪತ್ನಿ ಮನೆಯಲ್ಲೇ ನೆಲೆಸಿದ್ದು, ಆಗಾಗ್ಗೆ ಮಂಗಳೂರಿಗೆ ಬಂದು ಕಳ್ಳತನ ನಡೆಸುತ್ತಿದ್ದ. ನಿನ್ನೆ ಸಂಜೆ ಸೋಮೇಶ್ವರ ಬಸ್ಸು ತಂಗುದಾಣದ ಬಳಿಯ ಬಾಡಿಗೆ ಮನೆ ನಿವಾಸಿಯಾದ ಪ್ರಶಾಂತ್ ಅವರ ಮನೆ ಹಿಂಬಾಗಿಲ ಚಿಲಕ ಮುರಿದು ಒಳ ನುಗ್ಗಿದ ಮೊವಾಝ್ ಕಪಾಟಿನಲ್ಲಿದ್ದ ಕರಿಮಣಿ ಸರ ಮತ್ತು ಚೈನ್ ಸೇರಿ ಒಟ್ಟು 26 ಗ್ರಾಂ ಚಿನ್ನ, 3000 ರೂ. ನಗದನ್ನ ದೋಚಿದ್ದ. ಪ್ರಶಾಂತ್ ಅವರು ಪತ್ನಿ- ಮಗನೊಂದಿಗೆ ಉಡುಪಿಗೆ ತೆರಳಿದ್ದ ವೇಳೆ ಕಳ್ಳತನ ನಡೆದಿತ್ತು.

ನಿನ್ನೆ ಸಂಜೆ 7.15ರ ವೇಳೆ ಪ್ರಶಾಂತ್ ನೆಲೆಸಿರುವ ಬಾಡಿಗೆ ಮನೆ ಪಕ್ಕದಲ್ಲಿರುವ ನಮೋ ಹೆರಿಟೇಜ್ ಎಂಬ ಹೋಂ ಸ್ಟೇ ಕಟ್ಟಡಕ್ಕೆ ತಲೆಗೆ ಟೊಪ್ಪಿ ಮತ್ತು ಕಣ್ಣಿಗೆ ಕನ್ನಡಕ ಹಾಕಿ ನುಗ್ಗಿದ್ದ ಮೊವಾಝ್ ಬಾಗಿಲನ್ನ ಕಬ್ಬಿಣದ ಸಲಾಕೆಯಲ್ಲಿ ಮುರಿದು ಕನ್ನ ಹಾಕಿರೋ ಬಗ್ಗೆ ಅಲ್ಲಿನ ಸಿಸಿ ಟಿವಿಯಲ್ಲಿ ದಾಖಲಾಗಿತ್ತು. ಹೋಂ ಸ್ಟೇ ಒಳಗಡೆ ತಡಕಾಡಿದ ಆತನಿಗೆ ಏನೂ ಸಿಕ್ಕಿರಲಿಲ್ಲ.

ನಿನ್ನೆ ರಾತ್ರಿ ಉಳ್ಳಾಲ ಮೇಲಂಗಡಿಯ ಕಿರೋಡಿಯನ್ ಕುಟುಂಬಸ್ಥರ ದೈವಸ್ಥಾನಕ್ಕೂ ಈತ ಕನ್ನ ಹಾಕಿದ್ದು ಹಿತ್ತಾಳೆಯ ದೈವದ ಪರಿಕರ ಮತ್ತು ಕಾಣಿಕೆ ಹುಂಡಿಯ ಚಿಲ್ಲರೆ ಹಣ ಎಗರಿಸಿದ್ದ. ಪಕ್ಕದಲ್ಲೇ ಇದ್ದ ದೈವದ ಚಾಕರಿಯವರಾದ ಪ್ರಸಾದ್ ಅವರ ಮನೆ ಹಿಂಬಾಗಿಲನ್ನ ಮುರಿದು ಕಪಾಟಿನಲ್ಲಿದ್ದ 56 ಗ್ರಾಂ ಚಿನ್ನವನ್ನ ದೋಚಿ ಪರಾರಿಯಾಗಿದ್ದ.ಈ ಬಗ್ಗೆಯೂ ದೈವಸ್ಥಾನದ ಹತ್ತಿರದ ಮನೆಯೊಂದರ ಸಿಸಿ ಟಿವಿಯಲ್ಲಿ ಕಳ್ಳ ಮೊವಾಝ್ ನ ಚಹರೆ ದಾಖಲಾಗಿತ್ತು.

ಕ್ಷಿಪ್ರವಾಗಿ ಕಳ್ಳನ ಜಾಡನ್ನ ಹಿಡಿದ ಉಳ್ಳಾಲ ಪಿಐ ಸಂದೀಪ್ ನೇತೃತ್ವದ ತಂಡವು ಕಳ್ಳನ ಹೆಡೆಮುರಿ ಕಟ್ಟಲು ಯಶಸ್ವಿಯಾಗಿದೆ. ಮೊವಾಝ್ ಈ ಹಿಂದೆ ಉಳ್ಳಾಲದಲ್ಲಿ ನಡೆದ ಅನೇಕ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Edited By : Shivu K
Kshetra Samachara

Kshetra Samachara

09/09/2022 08:29 am

Cinque Terre

14.37 K

Cinque Terre

2

ಸಂಬಂಧಿತ ಸುದ್ದಿ