ಕಡಬ: ಮರದ ಕೊಂಬೆ ಕಡಿಯುವಾಗ ವಿದ್ಯುತ್ ತಗುಲಿ ಯುವಕನೋರ್ವ ಮೃತಪಟ್ಟ ದಾರುಣ ಘಟನೆ ಕಡಬದಲ್ಲಿ ನಡೆದಿದೆ.
ಕುಂತೂರು ಕಾಲಾಯಿಲ್ ನಿವಾಸಿ ಮನೋಜ್(43) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಮನೋಜ್ ಅವರು ಮರದ ಕೊಂಬೆಯೊಂದು ಕಡಿಯುವಾಗ 33 kv ವಿದ್ಯುತ್ ತಂತಿ ತಾಗಿ ದುರ್ಮರಣ ಸಂಭವಿಸಿದೆ. ಮನೋಜ್ ಮೃತದೇಹ ಮರದಲ್ಲೇ ನೇತಾಡುತ್ತಿತ್ತು
ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತದೇಹವನ್ನು ಕಡಬ ಸರಕಾರಿ ಆಸ್ಪತ್ರೆಗೆ ತರಲಾಗಿದೆ.
ಕಡಬ ಪೊಲೀಸ್ ಠಾಣಾ ವ್ಯಾಪಿಯಲ್ಲಿ ಘಟನೆ ನಡೆದಿದೆ.
Kshetra Samachara
07/09/2022 04:42 pm