ಕಾರ್ಕಳ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ಮನೆಯ ಕಪಾಟಿನಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳದ ಮುಂಡ್ಕೂರು ಗ್ರಾಮದ ಸಚ್ಚರಿಪೇಟೆ ಪೊಸ್ರಾಲ್ ಎಂಬಲ್ಲಿ ವಿವಿಟಾ ಡಿಸೋಜಾ ಎಂಬವರ ಮನೆಯಲ್ಲಿ ಈ ಕಳ್ಳತನ ಕೃತ್ಯ ನಡೆದಿದೆ. ಆ.30 ರಂದು ಅವರು ತಮ್ಮ ಗಂಡನ ಮನೆಯ ಬೆಡ್ ರೂಮ್ ನ ಕಪಾಟಿನಲ್ಲಿನ ಲಾಕರ್ ನಲ್ಲಿ ಅಂದಾಜು 6 ಲಕ್ಷ ರೂ ಮೌಲ್ಯದ ಸುಮಾರು 154 ಗ್ರಾಮ್ ತೂಕದ ಚಿನ್ನದ ಒಡವೆಗಳನ್ನು ಇಟ್ಟು ಲಾಕ್ ಮಾಡಿ ಹೋಗಿದ್ದರು, ಆದರೆ ಸೆ.5 ರಂದು ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಇಟ್ಟಿದ್ದ ಚಿನ್ನ ಕಳವಾಗಿರುವುದು ಗಮನಕ್ಕೆ ಬಂದಿದ್ದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
Kshetra Samachara
06/09/2022 03:24 pm