ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಲ್ಲದ ವಿವಾಹ : ಇಲಿ ಪಾಷಾಣ ಸೇವಿಸಿ ನವ ವಿವಾಹಿತೆ ಸಾವು

ಉಳ್ಳಾಲ : ಒಲ್ಲದ ವರನನ್ನ ವರಿಸಿದ್ದ ನವ ವಿವಾಹಿತೆಯೋರ್ವಳು 15 ದಿನದಲ್ಲಿ ಇಲಿ ಪಾಷಾಣ ಸೇವಿಸಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಅಂಬ್ಲಮೊಗರು ಗ್ರಾಮದ ಕೋಟ್ರಗುತ್ತು ಎಂಬಲ್ಲಿ ನಡೆದಿದೆ.ಅಂಬ್ಲಮೊಗರು ಗ್ರಾಮದ ಕೋಟ್ರಗುತ್ತು ನಿವಾಸಿ ರಶ್ಮಿ ವಿಶ್ವಕರ್ಮ (24) ಮೃತ ನವ ವಿವಾಹಿತೆ. ಕಳೆದ ಆಗಸ್ಟ್ 21 ರಂದು ರಶ್ಮಿ ಗಂಜಿ ಮಠ ಮೂಲದ ದುಬೈಯಲ್ಲಿ ಇಂಜಿನಿಯರ್ ಆಗಿರುವ ಸಂದೀಪ್ ಎಂಬವರನ್ನ ವಿವಾಹವಾಗಿದ್ದಳು. ರಶ್ಮಿಗೆ ಈ ಮದುವೆ ಇಷ್ಟವಿರಲಿಲ್ಲ ಎನ್ನಲಾಗಿದೆ.

ಇನ್ನು ಕಳೆದ ಸೆ.3 ರಂದು ಮಂಗಳೂರಿನ ಕೋಡಿಕಲ್ ನ ರಶ್ಮಿಯ ಅಕ್ಕನ ಮನೆಯಲ್ಲಿ ನವ ವಿವಾಹಿತ ಜೋಡಿಗೆ ಔತಣ ಕೂಟ ಏರ್ಪಡಿಸಲಾಗಿತ್ತು ಅಂದು ಬೆಳಿಗ್ಗೆಯೇ ತವರು ಮನೆಯಲ್ಲಿದ್ದ ರಶ್ಮಿ ಮನೆಯವರಲ್ಲಿ ತಾನು ಇಲಿ ಪಾಷಾಣ ಸೇವಿಸಿರುವುದಾಗಿ ಹೇಳಿದ್ದಾಳೆ. ಆ ಕೂಡಲೇ ವಾಂತಿ ಮಾಡಿ ಅಸ್ವಸ್ಥಳಾಗಿದ್ದ ರಶ್ಮಿಯನ್ನ ಕುಟುಂಬಸ್ಥರು ದೇರಳಕಟ್ಟೆಯ ಖಾಸಗಿ ಅಸ್ಪತ್ರೆಗೆ ಸೇರಿಸಿದ್ದರು.ಇಂದು ಮುಂಜಾನೆ ರಶ್ಮಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ರಶ್ಮಿಯ ಪತಿ ಸಂದೀಪ್ ಅವರು ಮೂಲತ: ಗಂಜಿ ಮಠದವರಾಗಿದ್ದರೂ ಅವರ ಕುಟುಂಬ ಮುಂಬೈಯಲ್ಲಿ ನೆಲೆಸಿದೆ.ಮದುವೆ ಆದ ಬಳಿಕ ರಶ್ಮಿ ಗಂಡನ ಜೊತೆ ನೆಲೆಸೇ ಇಲ್ಲವಂತೆ. ಸದ್ಯ ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

05/09/2022 05:29 pm

Cinque Terre

18.73 K

Cinque Terre

2

ಸಂಬಂಧಿತ ಸುದ್ದಿ