ಕೋಟ: ಇಲ್ಲಿನ ಪಾಂಡೇಶ್ವರ ಶಾಲಾ ಆವರಣದ ಜಾಗದಲ್ಲಿ ನಡು ಮಧ್ಯಾಹ್ನ ಇಸ್ಟೀಟ್ ಜೊತೆಗೆ ಜುಗಾರಿ ಆಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಕೋಟ ಎಸೈ ಮಧು ಬಿ. ಹಾಗೂ ತಂಡ 9 ಜನರನ್ನು ದಸ್ತಗಿರಿ ಮಾಡಿ, ಹಣ ಮತ್ತು ವಾಹನ ಜಪ್ತಿ ಮಾಡಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ವಶಕ್ಕೆ ಪಡೆದುಕೊಂಡ ಆರೋಪಿಗಳನ್ನು ತೆಂಕಬೆಟ್ಟು ನಿವಾಸಿ ಗಣೇಶ ಪೂಜಾರಿ, ಕೋಡ ಕನ್ಯಾನದ ಬೀಚ್ ರಸ್ತೆ ನಿವಾಸಿ ರಾಘವೇಂದ್ರ ಕುಂದರ್, ಪಾಂಡೇಶ್ವರದ ಹಾಡಿಮನೆ ನಿವಾಸಿ ಪ್ರವೀಣ ಕುಮಾರ್, ಗುಂಡ್ಮಿ ರಥಬೀದಿ ನಿವಾಸಿ ಚಂದ್ರ ಪೂಜಾರಿ, ಪಾಂಡೇಶ್ವರ ಮಕ್ಕಿಮನೆ ನಿವಾಸಿ ಸಚಿನ್ ಪೂಜಾರಿ, ಹಾಡಿಮನೆ ಪುನೀತ್ ಪೂಜಾರಿ, ಬಾಲ ಪಾಂಡೇಶ್ವರ, ಸಂದೇಶ ಪಾಂಡೇಶ್ವರ ಹಾಗೂ ಹರೀಶ ಪಾಂಡೇಶ್ವರ ಎಂದು ಗುರುತಿಸಲಾಗಿದೆ.
ಜುಗಾರಿ ಆಟಕ್ಕೆ ಬಳಸಿದ ನಗದು 8,840 ರೂಪಾಯಿ ಸೇರಿದಂತೆವ30 ಸಾವಿರ ಮೌಲ್ಯದ ಸುಝುಕಿ ಬೈಕ್, 30 ಸಾವಿರ ಮೌಲ್ಯದ ಹೊಂಡಾ ಎಕ್ಟೀವಾ ಬೈಕ್ ವಶಪಡಿಸಿಕೊಳ್ಳಲಾಗಿದೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
01/09/2022 11:00 pm