ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು : ಪಡಿತರ ಅಕ್ಕಿ ಕಳ್ಳಸಾಗಾಟ ಸಂದರ್ಭ ಅಪಘಾತ : ಈಚರ್ ಪಲ್ಟಿ ,ಚಾಲಕನಿಗೆ ಗಾಯ!

ಬೈಂದೂರು: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಾರಿಯೊಂದು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಈಚರ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈಚರ್ ಪಲ್ಟಿಯಾದ ಘಟನೆ ಅರೆಹೊಳೆ ಕ್ರಾಸ್ ಬಳಿ ಸಂಭವಿಸಿದೆ. ಘಟನೆಯಲ್ಲಿ ಚಾಲಕನ ಕೈಗೆ ತೀವ್ರ ಗಾಯಗಳಾಗಿವೆ.

ಭಟ್ಕಳದಿಂದ ಮಂಗಳೂರು ಕಡೆಗೆ ಅಣಬೆ ಸಾಗಿಸುತ್ತಿದ್ದ ಈಚರ್ ವಾಹನಕ್ಕೆ ಅರೆಹೊಳೆಯಿಂದ ಅಕ್ಕಿ ಸಂಗ್ರಹಿಸಿ ತಿರುವಿನಲ್ಲಿ ವೇಗವಾಗಿ ಹೆದ್ದಾರಿಗೆ ನುಗ್ಗಿದ ಲಾರಿ ಢಿಕ್ಕಿ ಹೊಡೆಯಿತು . ಇದರಿಂದಾಗಿ ಈಚರ್ ರಸ್ತೆಯಲ್ಲಿ ಪಲ್ಟಿಯಾಗಿ ಬಿದ್ದಿದೆ. ಅಕ್ರಮ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು ಪೊಲೀಸರು ಠಾಣೆಗೆ ಕೊಂಡೊಯ್ದಿದ್ದು, ಬೈಂದೂರು ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Edited By : Shivu K
Kshetra Samachara

Kshetra Samachara

30/08/2022 10:09 am

Cinque Terre

7.07 K

Cinque Terre

2

ಸಂಬಂಧಿತ ಸುದ್ದಿ