ಕಾಪು: ಮೊಬೈಲ್ ಶಾಪ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಉದ್ಯಾವರ ಸಂಪಿಗೆನಗರ ಮಸೀದಿ ಬಳಿಯ ಯುವತಿಯೋರ್ವಳು ಬೆಳ್ಳಂಬೆಳಗ್ಗೆ ಮನೆಯಿಂದ ನಾಪತ್ತೆಯಾದ ಘಟನೆ ಆ. 23ರಂದು ನಡೆದಿದೆ.
ನೇತ್ರಾವತಿ (20) ಕಾಣೆಯಾಗಿರುವ ಯುವತಿ. ಕಳೆದ ಮೂರು ತಿಂಗಳಿನಿಂದ ಉದ್ಯಾವರದ ಮೊಬೈಲ್ ಶಾಪ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ನೇತ್ರಾವತಿ ಅವರು ಆ. 22ರಂದು ರಾತ್ರಿ ಊಟ ಮಾಡಿ ಮಲಗಿದ್ದು ಆ. 23 ರಂದು ಬೆಳಗ್ಗೆ 5.30ಕ್ಕೆ ಹಾಲ್‌ನಿಂದ ಎದ್ದು ವಾಶ್ ರೂಂಗೆ ಹೋಗಿದ್ದು, ಅಲ್ಲಿಂದ ಮರಳದೇ ಕಾಣೆಯಾಗಿದ್ದಳು.
ಮನೆಯವರೆಲ್ಲರೂ ಸೇರಿ ಅಕ್ಕಪಕ್ಕದವರ ಮನೆಗಳಲ್ಲಿ ಸಂಬಂಧಿಕರ ಮನೆಗಳಲ್ಲಿ ಪರಿಚಯದವರಲ್ಲಿ ವಿಚಾರಿಸಿದ್ದು ಈವರೆಗೂ ಪತ್ತೆಯಾಗಿರುವುದಿಲ್ಲ ಎಂದು ಅವರ ಅಕ್ಕ ವಿಜಯಲಕ್ಷ್ಮೀ ಅವರು ಕಾಪು ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Kshetra Samachara
25/08/2022 09:21 am