ಮಂಗಳೂರು: ನವರತ್ನದ ಬಗ್ಗೆ ವಿಚಾರಿಸುವ ನೆಪದಲ್ಲಿ ಜ್ಯುವೆಲ್ಲರ್ಸ್ ಗೆ ಬಂದಿರುವ ಅಪರಿಚಿತನೋರ್ವನು ವಂಚಿಸಿ 5 ಪವನ್ ಚಿನ್ನ ದೋಚಿ ಪರಾರಿಯಾಗಿರುವ ಘಟನೆ ಕಾವೂರು ಪೊಲೀಸ್ ಠಾಣಾ ವ್ಯಾಾಪ್ತಿಯ ಗಾಂಧಿನಗರದಲ್ಲಿ ನಡೆದಿದೆ.
ಶನಿವಾರ ಬೆಳಗ್ಗೆ 11.10ರ ವೇಳೆಗೆ ಕಾವೂರು ಬಳಿಯ ಗಾಂಧಿನಗರದ ಜ್ಯುವೆಲ್ಲರಿ ಶಾಪ್ ಗೆ ಅಪರಿಚಿತನೋರ್ವನು ಆಗಮಿಸಿ ನವರತ್ನದ ಬಗ್ಗೆ ವಿಚಾರಿಸಿದ್ದಾನೆ. ಅಂಗಡಿ ಮಾಲಕರು ಆತನಿಗೆ ಆಭರಣಗಳನ್ನು ತೋರಿಸುತ್ತಿದ್ದಂತೆ ಆತ 5 ಪವನ್ ಚಿನ್ನವನ್ನು ದೋಚಿ ಪರಾರಿಯಾಗಿದ್ದಾಾನೆ. ಪ್ರಕರಣದ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
ಈ ಕೃತ್ಯದಲ್ಲಿ ಇಬ್ಬರು ಅಪರಿಚಿತರು ಭಾಗಿಯಾಗಿದ್ದಾರೆಂದು ತಿಳಿದು ಬಂದಿದೆ. ಓರ್ವ ಅಂಗಡಿಯಿಂದ ಹೊರಗೆ ದೂರದಲ್ಲಿ ನಿಂತುಕೊಂಡಿದ್ದ. ಚಿನ್ನ ಕೊಂಡೊಯ್ದಿರುವ ವಿಚಾರ ಅಂಗಡಿ ಮಾಲಕರಿಗೆ ಕೆಲವು ಸಮಯದ ಅನಂತರ ಗಮನಕ್ಕೆ ಬಂದಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Kshetra Samachara
22/08/2022 10:12 pm