ಕುಂದಾಪುರ: ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಕಬ್ಬಿಣದ ಪ್ಲೇಟ್‌ನಿಂದ ಹೊಡೆದು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಉಡುಪಿ ಜಿಲ್ಲೆ ಕುಂದಾಪುರದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆ ಸಾಗರ ಮೂಲದ ರವಿ ಆಚಾರಿ ತನ್ನ ಪತ್ನಿ ಪೂರ್ಣಿಮಾ (38) ಕೊಲೆಗೈದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕುಂದಾಪುರದ ಹೆಮ್ಮಾಡಿಯ ದೇವಲ್ಕುಂದದಲ್ಲಿ ಘಟನೆ ನಡೆದಿದೆ.
ರವಿ ಪೂಜಾರಿ ಲಾರಿ ಚಾಲಕನಾಗಿದ್ದ. ಆದರೆ ಕುಟುಂಬದ ಕಾರ್ಯಕ್ರಮವೊಂದಕ್ಕೆ ಪತ್ನಿಯನ್ನು ಶಿವಮೊಗ್ಗದಿಂದ ಹೆಮ್ಮಾಡಿಯ ದೇವಲ್ಕುಂದಕ್ಕೆ ಕರೆಸಿದ್ದ. ಈ ವೇಳೆ ದಂಪತಿಯ ನಡುವೆ ಜಗಳವಾಗಿದ್ದು, ಕೋಪದಲ್ಲಿ ರವಿ ಪತ್ನಿಯ ಮೇಲೆ ಕಬ್ಬಿಣದ ಪ್ಲೇಟ್‌ನಿಂದ ಹಲ್ಲೆ ಮಾಡಿ ಕೊಲೆಗೈದಿದ್ದಾನೆ. ಬಳಿಕ ತಾನು ಕೂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
22/08/2022 01:02 pm