ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಟ್ಕಳ: ಅಪಹರಣಕ್ಕೊಳಗಾದ ಬಾಲಕ ಶಿವಮೊಗ್ಗದಲ್ಲಿ ಪತ್ತೆ! : ದೌಡಾಯಿಸಿದ ಭಟ್ಕಳ ಪೊಲೀಸ್!

ಭಟ್ಕಳ: ಇಲ್ಲಿನ ಬಂದರ್ ರಸ್ತೆಯ 2ನೇ ಕ್ರಾಸ್ ಕೋಗ್ತಿ ಸಮೀಪದ ಆಜಾದ್ ನಗರದಲ್ಲಿ ಶನಿವಾರ ರಾತ್ರಿ ದುಷ್ಕರ್ಮಿಗಳಿಂದ ಅಪಹರಣಕ್ಕೊಳಗಾದ ಬಾಲಕ ಅಲಿಸಾದ್(8) ಶಿವಮೊಗ್ಗದಲ್ಲಿ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.

ಮಾಹಿತಿ ಆಧರಿಸಿ ಪತ್ತೆಗೆ ಯತ್ನಿಸಿದ ಭಟ್ಕಳ ಪೊಲೀಸರು ಎರಡು ತಂಡಗಳಲ್ಲಿ ಶಿವಮೊಗ್ಗಕ್ಕೆ ಭಾನುವಾರ ಮಧ್ಯಾಹ್ನ ದೌಡಾಯಿಸಿದ್ದಾರೆ. ಬಾಲಕನನ್ನು ರಕ್ಷಿಸುವ ಆದ್ಯತೆ ಮೊದಲಾಗಿದ್ದು, ಆರೋಪಿಗಳನ್ನೂ ಬಂಧಿಸಿ ಪ್ರಕರಣ ಬೇಧಿಸುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಬದರೀನಾಥ್ ಭಟ್ಕಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಶನಿವಾರ ರಾತ್ರಿ ಎಂಟು ಗಂಟೆ ಸುಮಾರಿಗೆ ಎಂಟು ವರ್ಷದ ಅಲಿಸಾದ್ ಎಂಬ ಬಾಲಕ ತನ್ನ ಮನೆಯಿಂದ ಕೇವಲ 300 ಮೀಟರ್ ದೂರದ ಅಂಗಡಿಯಿಂದ ಬ್ರೆಡ್ ಖರೀದಿಸಿ ವಾಪಾಸ್ಸು ಬರುತ್ತಿದ್ದ ವೇಳೆ ಇಕೋ ಕಾರಿನಲ್ಲಿ ಬಂದ‌ ದುಷ್ಕರ್ಮಿಗಳು ಕೇವಲ ಆರೇ ಸೆಕುಂಡುಗಳಲ್ಲಿ ಬಲಾತ್ಕಾರವಾಗಿ ಹೊತ್ತೊಯ್ದಿದ್ದಾರೆ. ಇದರಿಂದಾಗಿ ಭಟ್ಕಳದಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ. ಬಾಲಕನ ತಂದೆ ಇಸ್ಲಾಂಸಾದ್ ಗಲ್ಫ್ ನಿಂದ ಮನೆಗೆ ವಾಪಾಸ್ಸಾಗಿದ್ದಾರೆ.

ಘಟನೆ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮೆರಾ ಪರಿಶೀಲಿಸಲಾಗಿದ್ದು, ಕಾರಿನ ಹಿಂದುಗಡೆಯಿಂದ ಬೈಕೊಂದು ಬೆಂಗಾವಲಾಗಿ ಸಂಚರಿಸಿರುವುದು ಕಂಡು ಬಂದಿದೆ. ಇದೇ ಸಂದರ್ಭ ಎದುರುಗಡೆಯಿಂದ ಹೆಣ್ಣುಮಗಳೊಬ್ಬಳು ಘಟನೆಯನ್ನು ನೋಡಿ ಹಿಂದಕ್ಕೆ ತಿರುಗಿ ಓಡಿ ಬರುತ್ತಿವುದು ಸೆರೆಯಾಗಿದೆ.

ಒಟ್ಟಾರೆಯಾಗಿ ಅಪಹರಣಕ್ಕೊಳಗಾದ ಪುಟ್ಟ ಬಾಲಕ ಕ್ಷೇಮವಾಗಿ ಮನೆಗೆ ಬರಲಿ ಎಂಬುದೆ ಹಾರೈಕೆ.

ಜಯಶೇಖರ್ ಮಡಪ್ಪಾಡಿ, ಪಬ್ಲಿಕ್ ನೆಕ್ಸ್ಟ್ ಕುಂದಾಪುರ

Edited By : Nagaraj Tulugeri
PublicNext

PublicNext

21/08/2022 06:56 pm

Cinque Terre

23.55 K

Cinque Terre

0

ಸಂಬಂಧಿತ ಸುದ್ದಿ