ಕುಂದಾಪುರ: ಇಲ್ಲಿನ ಹಲುವಳ್ಳಿ ಗ್ರಾಮದ ಕಿನ್‌ಮಾನ್‌ಬೆಟ್ಟು ಸುಬ್ರಮಣ್ಯ ಭಟ್ ರವರ ಮನೆಯ ಗೋಡೌನ್‌ನಲ್ಲಿ ಇರಿಸಿದ್ದ ಸುಮಾರು 31 ಚೀಲ ಗೋಟು ಅಡಿಕೆಯನ್ನು ಕಳವು ಮಾಡಿರುವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ರವಿ ನಾಯ್ಕ(37) ಬಂಧಿತ ಆರೋಪಿಯಾಗಿದ್ದಾನೆ.
ತನ್ನ ಬೈಕ್‌ನಲ್ಲಿ ಕಳವು ಮಾಡಿದ ಅಡಿಕೆ ಸಮೇತ ಮಾರಾಟ ಮಾಡಲು ಹೋಗುತ್ತಿರುವಾಗ ಆತನನ್ನು ತಡೆದು ನಿಲ್ಲಿಸಿ ವಿಚಾರಿಸಿದ ವೇಳೆ ಕಳವು ಬಗ್ಗೆ ಒಪ್ಪಿಕೊಂಡಿದ್ದಾನೆ. ಆತನನ್ನು ಬೈಕ್ ಹಾಗೂ ಅಡಿಕೆ ಸ್ವೊತ್ತು ಸಮೇತ ವಶಕ್ಕೆ ಪಡೆಯಲಾಗಿದೆ. ಕಳೆದ ಎಪ್ರಿಲ್ ತಿಂಗಳಿನಿಂದ ಈ ತನಕ 31 ಚೀಲ ಒಟ್ಟು 620 ಕೆಜಿ ಅಡಿಕೆಯನ್ನು ಕಳವು ಮಾಡಿ ಬೈಕಿನಲ್ಲಿ ಸಾಗಿಸಿ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ ಮೇರೆಗೆ ಅಡಿಕೆ ಮಾರಾಟ ಮಾಡಿರುವ ಕೆಂಜೂರು ಹಾಗೂ ಪೆರ್ಡೂರು ಅಂಗಡಿಯಿಂದ ಸ್ವೊತ್ತಿನ ಮೌಲ್ಯವನ್ನು ವಶ ಪಡಿಸಿಕೊಂಡಿದ್ದು 620 ಕೆಜಿ ತೂಕದ ಅಡಿಕೆ ಮೌಲ್ಯ 1ಲಕ್ಷದ 20 ಸಾವಿರ ನಗದು ಹಾಗೂ 20 ಕೆಜಿ ಅಡಿಕೆ ಹಾಗೂ ಸುಮಾರು 10 ಸಾವಿರ ಮೌಲ್ಯದ ಮೋಟಾರ್ ಸೈಕಲ್ ಅನ್ನು ವಶ ಪಡಿಸಿಕೊಳ್ಳಲಾಗಿದೆ.
Kshetra Samachara
18/08/2022 10:26 pm