ಕುಂದಾಪುರ: ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೊರ್ಗಿ ಬಳಿಯಲ್ಲಿ ಮಹಿಳೆಯೋರ್ವರಿಗೆ ಗಂಭೀರ ಹಲ್ಲೆ ನಡೆಸಿ, ಚಿನ್ನಾಭರಣವನ್ನು ಕಳವು ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರವೀಣ್( 24 ) ಬಂಧಿತ ಆರೋಪಿ.
ಆರೋಪಿ ಆ.5 ರಂದು ಬೈಕ್ ನಲ್ಲಿ ಬಂದು ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದ ಕಾಡಿನಬೆಟ್ಟು ಬಳಿ ಮಗನನ್ನು ಶಾಲೆಯಿಂದ ಕರೆದುಕೊಂಡು ಹೋಗಲು ರಸ್ತೆಯ ಬದಿ ನಿಂತಿದ್ದ ದೇವಕಿ ಪೂಜಾರ್ತಿ (32) ತಲೆಗೆ ಕಬ್ಬಿಣದ ರಾಡ್‌ನಿಂದ ಗಂಭೀರವಾಗಿ ಹಲ್ಲೆ ಮಾಡಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರ ಅಂದಾಜು 2 ಪವನ್, ಕೈಯಲ್ಲಿದ್ದ ಬಳೆ ಅಂದಾಜು ತೂಕ 2 ½ ಪವನ್ ಮತ್ತು ಉಂಗುರ ಅಂದಾಜು ಮೌಲ್ಯ ½ ಪವನ್ ಒಟ್ಟು ರೂಪಾಯಿ 1,60,000/- ಮೌಲ್ಯದ ಚಿನ್ನಾಭರಣಗಳನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಆರೋಪಿಯನ್ನು ಬಂಧಿಸಿರುವ ಪೊಲೀಸರು ಸುಲಿಗೆ ಮಾಡಿರುವ ಚಿನ್ನದ ಉಂಗುರ ಮತ್ತು ಗುಜ್ಜಾಡಿ ಸೊಸೈಟಿಯಲ್ಲಿ ಚಿನ್ನದ ಕರಿಮಣಿ ಸರ ಅಡವಿರಿಸಿ ಪಡೆದುಕೊಂಡಿರುವ ನಗದು ಹಣ ಒಟ್ಟು ರೂ. 41,000 ಆರೋಪಿಯಿಂದ ವಶಪಡಿಸಿಕೊಂಡಿದ್ದಾರೆ.
Kshetra Samachara
11/08/2022 07:27 pm