ಕುಂದಾಪುರ: ತಾಲೂಕಿನ ಮರವಂತೆಯಲ್ಲಿರುವ ಶ್ರೀ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನ ನಡೆದಿರುವುದು ಬೆಳಕಿಗೆ ಬಂದಿದೆ.
ದೇವಸ್ಥಾನದಲ್ಲಿ ಯಾರೂ ಇಲ್ಲದ ವೇಳೆ ಬಾಗಿಲು ಒಡೆದು, ಒಳ ನುಗ್ಗಿದ ಯುವಕ, ವರಾಹ ವಿಷ್ಣು ನಾರಸಿಂಹ ದೇವರ ಮೂರ್ತಿ ಮುಟ್ಟಿ ಅಪವಿತ್ರ ಗೊಳಿಸಿದ್ದಾನೆ. ಬಳಿಕ ಅಲ್ಲಿ ಏನೂ ಸಿಗದೇ ಬರಿಗೈಯಲ್ಲಿ ವಾಪಸ್ ಆಗಿದ್ದಾನೆ. ಯುವಕ ಕಳ್ಳತನ ನಡೆಸಲು ಯತ್ನಿಸಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕುಂದಾಪುರ ತಾಲೂಕಿನ ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Kshetra Samachara
10/08/2022 02:58 pm