ಕಾರ್ಕಳ: ಕಾರ್ಕಳ ಗಾಂಧಿಮೈದಾನದ ಬಳಿಯ ನಿವಾಸಿ ನಜೀಮಾ ಅವರಿಗೆ ಎರಡು ತಿಂಗಳ ಹಿಂದೆ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಒಡ್ಡಿದ ಕುರಿತು ಮೂರು ಮಂದಿಯ ಮೇಲೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರೆ ಮಹಿಳೆ ತನ್ನ ಮಗಳೊಂದಿಗೆ ಕಾರ್ಕಳ ಕಾಬೆಟ್ಟು ಜಯಭಾರತಿ ಕ್ರಾಸ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಸಂಬಂಧಿಕರಾದ ಶಬೀರ್, ಇಮ್ರಾನ್, ಶಾಹಿದ್ ಬೈದು ಕೊಲೆ ಬೆದರಿಕೆ ಒಡ್ಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Kshetra Samachara
10/08/2022 02:39 pm