ವಿಟ್ಲ: ನೆಕ್ಕರೆ ಕಾಡಿನಲ್ಲಿ ಮಾನವ ತಲೆ ಬುರುಡೆ ಮತ್ತು ಎಲುಬು ಹಾಗೂ ಬಟ್ಟೆ ಪತ್ತೆಯಾಯಾಗಿವೆ.
ನೆಕ್ಕರೆ ಕಾಡಿನ ಸಮೀಪದ ಗುಡ್ಡದಲ್ಲಿ ತಲೆಬುರುಡೆ ಮತ್ತು ಎಲುಬು ಹಾಗೂ ಬಟ್ಟೆ ಪತ್ತೆಯಾಗಿದ್ದು, ಈ ಘಟನೆ ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿಸಿದೆ. ಸಂಜೆ ವೇಳೆ ಕಟ್ಟಿಗೆ ತರಲು ಗುಡ್ಡಕ್ಕೆ ಹೋದವರಿಗೆ ಈ ತಲೆ ಬುರುಡೆ, ಎಲುಬು ಬಟ್ಟೆಗಳು ಕಾಣ ಸಿಕ್ಕಿದ್ದು, ಅವರು ಮನೆಗೆ ಬಂದು ತಿಳಿಸಿದ್ದು, ಬಳಿಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಈ ಹಿಂದೆ ಕಾಣೆಯಾದವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸ್ಥಳದಲ್ಲಿ ವ್ಯಕ್ತಿಯ ಪಂಚೆ, ಶರ್ಟ್ ಪತ್ತೆಯಾಗಿದ್ದು, ತಲೆ ಬುರುಡೆ ಎಲುಬು ಯಾವ ವ್ಯಕ್ತಿಯದ್ದು ಎಂಬುದು ತನಿಖೆಯ ನಂತರವಷ್ಟೇ ತಿಳಿಯಬೇಕಿದೆ.
Kshetra Samachara
09/08/2022 10:40 am