ಮಂಗಳೂರು: ಬಂಧನ ವಾರೆಂಟ್ ನಿಮಿತ್ತ ಪೊಲೀಸರು ಕರ್ತವ್ಯಕ್ಕೆ ತೆರಳಿದ ವೇಳೆ ಅಡ್ಡಿಪಡಿಸಿರುವ ಆರೋಪಿ ಹಾಗೂ ಆತನ ಪತ್ನಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಅದ್ಯಪಾಡಿ ನಿವಾಸಿ ಮೊಹಮ್ಮದ್ ಮನ್ಸೂರ್ ಅದ್ಯಪಾಡಿ(41) ಹಾಗೂ ಆತನ ಪತ್ನಿ ಅಸ್ಮತಾ ಬಂಧಿತ ಆರೋಪಿಗಳು. ಆರೋಪಿ ಮನ್ಸೂರ್ ರಾಜ್ಯದ ಬಜಪೆ ಠಾಣೆಯಲ್ಲಿ 6, ಮಡಿಕೇರಿ ಠಾಣೆಯಲ್ಲಿ 1, ತಿಪಟೂರು ಹುಳಿಯಾಲ ಠಾಣೆಯಲ್ಲಿ 1, ಕುಶಾಲನಗರ ಠಾಣೆಯಲ್ಲಿ 3, ಸಕಲೇಶಪುರ ಅರೆಹಳ್ಳಿ ಠಾಣೆಯಲ್ಲಿ 1, ಅಜೆಕಾರು ಠಾಣೆಯಲ್ಲಿ 1, ಕಾರ್ಕಳ ಠಾಣೆಯಲ್ಲಿ 1, ಸೋಮವಾರ ಪೇಟೆ ಠಾಣೆಯಲ್ಲಿ 3, ಕಾವೂರು ಠಾಣೆಯಲ್ಲಿ 1, ಸುರತ್ಕಲ್ ಠಾಣೆಯಲ್ಲಿ 2, ಮೂಡುಬಿದಿರೆ ಠಾಣೆಯಲ್ಲಿ 4 ಸೇರಿದಂತೆ 24ಕ್ಕಿಂತಲೂ ಅಧಿಕ ಪ್ರಕರಣಗಳು ದಾಖಲಾಗಿದೆ.
ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಬಂಧನ ವಾರಂಟ್ ಗೆ ಸಂಬಂಧಿಸಿದಂತೆ ಮೂಡುಬಿದಿರೆ ಹಾಗೂ ಬಜಪೆ ಠಾಣಾ ಪೊಲೀಸರು ಮೊಹಮ್ಮದ್ ಮನ್ಸೂರ್ ನ ಬಂಧನಕ್ಕೆ ಅದ್ಯಪಾಡಿಯಲ್ಲಿನ ಆತನ ಮನೆಗೆ ತೆರಳಿದ್ದರು. ಈ ವೇಳೆ ಆರೋಪಿ ಮನ್ಸೂರ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಲ್ಲದೆ ಆತನ ಪತ್ನಿ ಹಾಗೂ ಮನೆಯ ಇತರ ಸದಸ್ಯರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿ ಮೊಹಮ್ಮದ್ ಮನ್ದೂರ್ ಹಾಗೂ ಆತನ ಪತ್ನಿ ಅಸ್ಮತಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Kshetra Samachara
07/08/2022 02:52 pm