ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಸುಲಿಗೆ, ವಾಹನ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ; ಲಕ್ಷಾಂತರ ಮೌಲ್ಯದ ಸೊತ್ತು ವಶ

ಕಾಪು: ಸುಲಿಗೆ, ಮನೆ ಕಳವು ಹಾಗೂ ವಾಹನ ಕಳವು ಮಾಡುತ್ತಿದ್ದ ಆರೋಪಿಗಳನ್ನು ಕಾರ್ಕಳ ಹಾಗೂ ಪೊಲೀಸ್ ವೃತ್ತ ನಿರೀಕ್ಷಕರ ನೇತೃತ್ವದ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿ ಬಂಧಿಸಿದೆ.

ಮಹಮ್ಮದ್ ಆರೀಫ್ ಆಲಿಯಾಸ್ ಮುನ್ನ, ಮಹಮ್ಮದ್ ಮುನೀರ್ ಮತ್ತು ಅಕ್ಷ‌ರ್ ಬಂಧಿತರು. ಬಂಧಿತರಿಂದ 2 ಪವನ್ ತೂಕದ ಚಿನ್ನದ ಸರ, ಮೊಬೈಲ್, 61,000 ನಗದು, 3 ದ್ವಿಚಕ್ರ ವಾಹನ ಮತ್ತಿತರ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಕಾಪು ತಾಲೂಕಿನ ನಂದಿಕೂರು ಯುಪಿಸಿಎಲ್ ಬಳಿಯ ಮನೆಯಲ್ಲಿದ್ದ ವೃದ್ಧೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಸುಲಿಗೆ, ಉಚ್ಚಿಲ ಪಣಿಯೂರು ಮನೆಯೊಂದರಿಂದ 2,52,000 ಹಣ ಕಳವು ಸಹಿತ ಪಡುಬಿದ್ರಿ, ಉಚ್ಚಿಲ ಕಟಪಾಡಿ ಮತ್ತಿತರೆಡೆ ದ್ವಿಚಕ್ರ ವಾಹನ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪಡುಬಿದ್ರಿ ಮತ್ತು ಕಾಪು ಠಾಣೆಗಳಲ್ಲಿ ಆರೋಪಿಗಳ ವಿರುದ್ಧ ಕಳವು ಪ್ರಕರಣ ದಾಖಲಾಗಿದ್ದವು.

Edited By : Vijay Kumar
Kshetra Samachara

Kshetra Samachara

06/08/2022 08:35 pm

Cinque Terre

20.96 K

Cinque Terre

2

ಸಂಬಂಧಿತ ಸುದ್ದಿ