ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ದುಷ್ಕರ್ಮಿಗಳ ದಾಳಿಗೊಳಗಾದ ಯುವಕ ಸಾವು; ದುಷ್ಕರ್ಮಿಗಳ ದಾಳಿಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ಸುರತ್ಕಲ್ : ದ.ಕ.ಜಿಲ್ಲೆಯಲ್ಲಿ ಸರಣಿ ಕೊಲೆ ಮುಂದುವರಿದಿದ್ದು, ವಾರದ ಒಳಗೆ ಸುಳ್ಯದಲ್ಲಿ ಎರಡು ಕೊಲೆಗಳು ನಡೆದಿರುವ ಬೆನ್ನಲ್ಲೇ ಸುರತ್ಕಲ್ ನಲ್ಲಿ ಮತ್ತೋರ್ವ ಯುವಕನ ಕೊಲೆಯತ್ನ ಇಂದು ನಡೆದಿತ್ತು.‌ ಗಂಭೀರವಾಗಿ ಗಾಯಗೊಂಡಿದ್ದ ಫಾಝಿಲ್ ರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

ಫಾಝಿಲ್ ಸುರತ್ಕಲ್ ನಲ್ಲಿನ ವಸ್ತ್ರ ಮಳಿಗೆಯ ಮುಂಭಾಗ ನಿಂತಿದ್ದರು. ಈ ವೇಳೆ ಕಾರಿನಲ್ಲಿ ಬಂದಿರುವ ದುಷ್ಕರ್ಮಿಗಳು ಅವರನ್ನು ಅಟ್ಟಾಡಿಸಿ ಮಾರಕಾಯುಧಗಳಿಂದ ದಾಳಿ‌ ಮಾಡಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರನ್ನು ಸುರತ್ಕಲ್ ನ ಪದ್ಮಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ತಾನೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ದುಷ್ಕರ್ಮಿಗಳು ಫಾಝಿಲ್ ರನ್ನು ಅಟ್ಟಿಸಿಕೊಂಡು ಹತ್ಯೆ ಮಾಡಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ಥಳದಲ್ಲಿ ಸದ್ಯ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸುರತ್ಕಲ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By : Nagesh Gaonkar
PublicNext

PublicNext

28/07/2022 09:49 pm

Cinque Terre

98.59 K

Cinque Terre

48

ಸಂಬಂಧಿತ ಸುದ್ದಿ