ಕಾರ್ಕಳ: ಮನೆಯಲ್ಲಿದ್ದ ಒಬ್ಬಂಟಿ ಮಹಿಳೆಯ ಮಾನಹಾನಿಗೆ ಯತ್ನಿಸಿದ ಅಜೆಕಾರಿನ ಬಸ್ ಚಾಲಕನಿಗೆ ಸಾರ್ವಜನಿಕರು ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿರುವ ಘಟನೆ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಹರಿಖಂಡಿಗೆಯ ಬಂಡ್ರಾಲೆ ಎಂಬಲ್ಲಿ ನಡೆದಿದೆ.
ಅಜೆಕಾರಿನ ನಿವಾಸಿ ಬಸ್ ಚಾಲಕ ಖಲೀಲ್(60) ಎಂಬಾತ ಭಾನುವಾರ ಮಧ್ಯಾಹ್ನ ಹರಿಖಂಡಿಗೆ ಬಂಡ್ತಾಲೆ ನಿವಾಸಿ ಆಶಾ ಎಂಬವರ ಮನೆಗೆ ತೆರಳಿ ಅವರ ಮಗ ಧೀರಜ್ ಇದ್ದಾನಾ ಎಂದು ವಿಚಾರಿಸಿದಾಗ ಮನೆಯಿಂದ ಹೊರಬಂದ ಆಶಾ ಆತ ಇಲ್ಲವೆಂದಾಗ ನಿನ್ನ ಮೊಬೈಲ್ ನಂಬರ್ ಕೊಡು ಎಂದು ಪೀಡಿಸಿದ್ದ. ಇದಕ್ಕೆ ಸಿಟ್ಟಾದ ಮಹಿಳೆ ನಿನಗೇಕೆ ಮೊಬೈಲ್ ನಂಬರ್ ಕೊಡಬೇಕು ಎಂದಾಗ ಖಲೀಲ್ ಮಹಿಳೆ ಬಟ್ಟೆ ಎಳೆದು ಮಾನಹಾನಿಗೆ ಯತ್ನಿಸಿದಾಗ ಆಕೆ ಕಿರುಚಾಡಿದಾಗ ಆಕೆಯ ಸಹೋದರ ಉದಯ ಪೂಜಾರಿ ಎಂಬವರು ಓಡಿ ಬಂದು ಘಟನೆಯ ಕುರಿತು ಸಹೋದರಿ ಜತೆ ವಿಚಾರಿಸಿದಾಗ ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೆ ನಿನ್ನನ್ನು ಜೀವ ಸಹಿತ ಬಿಡುವವುದಿಲ್ಲ ಎಂದು ಕೊಲೆ ಬೆದರಿಕೆಯೊಡ್ಡಿದ್ದಾನೆ ಎಂದು ನೊಂದ ಮಹಿಳೆ ಆಶಾ ಹಿರಿಯಡ್ಕ ಠಾಣೆಗೆ ದೂರು ನೀಡಿದ್ದಾರೆ.
Kshetra Samachara
27/07/2022 12:56 pm