ಬೆಳ್ತಂಗಡಿ:ಸ್ಕೂಟರ್ ನಲ್ಲಿ ಹೋಗುತ್ತಿದ್ದ ಯುವಕನನ್ನು ಕಾರಿನಲ್ಲಿ ಬಂದ ತಂಡವೊಂದು ಕಿಡ್ನಾಪ್ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಅಂಕಾಜೆ ನಿವಾಸಿ ಮೆಕ್ಯಾನಿಕ್ ಕೆಲಸ ಮಾಡುವ ನಿಶೇತ್ ಎಂಬಾತನನ್ನು ಬೊಲೆರೋ ವಾಹನಲ್ಲಿ ಬಂದ ಸುಮಾರು ಎಂಟು ಮಂದಿ ದುಷ್ಕರ್ಮಿಗಳು ಬಲತ್ಕಾರದಿಂದ ಎಳೆದೊಯ್ದು ಸವಣಾಲು ರಸ್ತೆ ಮೂಲಕ ಅಳದಂಗಡಿಯ ಕೆದ್ದು ಶಾಲೆಯ ಆಟದ ಮೈದಾನಕ್ಕೆ ಕರೆದುಕೊಂಡು ಹೋಗಿ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ತನ್ನಲ್ಲಿದ್ದ ಮೊಬೈಲ್ ಮತ್ತು ಚಿನ್ನದ ಸರ ಕಸಿದಿದ್ದಾರೆ.
ಘಟನೆ ನಂತರ ಮಾಹಿತಿ ತಿಳಿದ ನಿಶೇತ್ ಯುವಕನ ಕಡೆಯವರು ಸ್ಥಳಕ್ಕೆ ಹೋಗಿದ್ದು ಎರಡು ತಂಡದ ನಡುವೆ ಹೊಡೆದಾಟ ನಡೆದಿದೆ. ಕಿಡ್ನಾಪ್ ಮಾಡಿ ಹಲ್ಲೆ ಮಾಡಿದ ಐದು ಮಂದಿ ಆರೋಪಿಗಳನ್ನು ಊರವರ ಸಹಾಯದಿಂದ ಹಿಡಿದು ವೇಣೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಗೊಂಡ ನಿಶೇತ್ ಮುಖ ಹಾಗೂ ಇನ್ನಿತರ ಭಾಗಕ್ಕೆ ಗಾಯವಾಗಿದ್ದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Kshetra Samachara
24/07/2022 10:00 pm