ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಕಾರಲ್ಲಿ ವ್ಯಕ್ತಿಯ ಸುಟ್ಟ ಪ್ರಕರಣ: ಆರೋಪಿಗಳಿಗೆ ಆ.1 ರವರೆಗೆ ನ್ಯಾಯಾಂಗ ಬಂಧನ

ಕುಂದಾಪುರ: ತಾಲೂಕಿನ ಹೇನ್‌ಬೇರು ನಿರ್ಜನ ಪ್ರದೇಶದಲ್ಲಿ ಕಾರ್ಕಳದ ಆನಂದ ದೇವಾಡಿಗ (60) ಅವರನ್ನು ಕಾರಿನೊಳಗೆ ಕೂಡಿ ಹಾಕಿ, ಜೀವಂತವಾಗಿ ಸುಟ್ಟು ಹಾಕಿದ ಪ್ರಕರಣದಲ್ಲಿ ಬಂಧಿತರಾಗಿರುವ ನಾಲ್ವರು ಆರೋಪಿಗಳಿಗೆ ಆ. 1ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ, ಕುಂದಾಪುರದ ಪ್ರಧಾನ ಸಿವಿಲ್‌ ನ್ಯಾಯಾಲಯವು ಆದೇಶ ನೀಡಿದೆ.

ಕೊಲೆ ಕೃತ್ಯದ ಆರೋಪಿಗಳಾದ ಸದಾನಂದ ಶೇರೆಗಾರ್‌ (52), ಶಿಲ್ಪಾ ಪೂಜಾರಿ (30), ಕೃತ್ಯಕ್ಕೆ ಸಹಕರಿಸಿದ ಸತೀಶ್‌ ದೇವಾಡಿಗ (49) ಮತ್ತು ನಿತಿನ್‌ ದೇವಾಡಿಗ (35)ನನ್ನು ಕುಂದಾಪುರದ ನ್ಯಾಯಾಲಯಕ್ಕೆ ಬೈಂದೂರು ಪೊಲೀಸರು ಹಾಜರು ಪಡಿಸಿದರು. ಕುಂದಾಪುರದ ಪ್ರಧಾನ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶ ಧನೇಶ್‌ ಮುಗಳಿ ಅವರು ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

19/07/2022 11:24 am

Cinque Terre

4.37 K

Cinque Terre

0

ಸಂಬಂಧಿತ ಸುದ್ದಿ