ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಕ್ಷಿಕೆರೆ: ಅಕ್ರಮವಾಗಿ ದನದ ಮಾಂಸ ಮಾರಾಟ; ವ್ಯಕ್ತಿಯ ಬಂಧನ!

ಮುಲ್ಕಿ: ಹಳೆಯಂಗಡಿ ಸಮೀಪದ ಪಕ್ಷಿಕೆರೆ ಕಾಪಿಕಾಡು ತಿಮ್ಮಕಟ್ಟೆ ಎಂಬಲ್ಲಿ ಮನೆ ಮನೆಗೆ ಸ್ಕೂಟರ್ ನಲ್ಲಿ ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಹಿಂದೂ ಸಂಘಟನೆಯವರು ಮಿಂಚಿನ ಕಾರ್ಯಾಚರಣೆಯಲ್ಲಿ ಹಿಡಿದು ಮುಲ್ಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿಯನ್ನು ಸುರತ್ಕಲ್ ಸಮೀಪದ ಸೂರಿಂಜೆ ನಿವಾಸಿ ಅಬ್ದುಲ್ ಖಾದರ್ (60) ಎಂದು ಗುರುತಿಸಲಾಗಿದೆ. ಆರೋಪಿ ಸುರತ್ಕಲ್ ಸಮೀಪದ ಸೂರಿಂಜೆಯಿಂದ ಒಳ ರಸ್ತೆಯಲ್ಲಿ ಪಕ್ಷಿಕೆರೆ ಕಾಪಿ ಕಾಡು ಬಳಿ ಮನೆ ಮನೆಗೆ ಪಾಕೆಟ್ ನಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದು, ಸಂಶಯಗೊಂಡ ವಿ.ಎಚ್.ಪಿ ಹಾಗೂ ಬಜರಂಗದಳದ ಮುಲ್ಕಿ ಸುರತ್ಕಲ್ ಘಟಕದ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆತನಿಂದ 45 ಕಿಲೋ ಅಧಿಕ ದನದ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಮುಲ್ಕಿ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Edited By :
PublicNext

PublicNext

18/07/2022 01:07 pm

Cinque Terre

24.56 K

Cinque Terre

2

ಸಂಬಂಧಿತ ಸುದ್ದಿ