ಉಡುಪಿ: ಶೂ ಹಣವನ್ನು ಹಿಂದಿರುಗಿಸುವ ನೆಪದಲ್ಲಿ ವ್ಯಕ್ತಿಯೊಬ್ಬರ ಬ್ಯಾಂಕಿನ ಕ್ರೆಡಿಟ್ ಕಾರ್ಡ್‌ನ ವಿವರಗಳನ್ನು ಪಡೆದು ಬ್ಯಾಂಕ್ ಖಾತೆಯಿಂದ ಒಟ್ಟು 39,061 ರೂ.ಗಳನ್ನು ಆನ್‌ಲೈನ್ ಮೂಲಕ ಲಪಟಾಯಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ವಸಂತ ಶೆಟ್ಟಿ ಎಂಬವರು ಹೊಸದಾಗಿ ಖರೀದಿಸಿದ ಶೂ ಅನ್ನು ಹಿಂದಿರುಗಿಸುವ ಬಗ್ಗೆ ಕರೆ ಮಾಡಿದಾಗ, ಶೂ ಹಣ ಹಿಂದಿರುಗಿಸಲು ನಿಮ್ಮ ಕ್ರೆಡಿಟ್ ಕಾರ್ಡ್ ವಿವರಗಳನ್ನು ಒದಗಿಸುವಂತೆ ಸೂಚಿಸಲಾಯಿತು.
ಅದರಂತೆ ವಸಂತ ಶೆಟ್ಟಿ ಅವರು ಕ್ರೆಡಿಟ್ ಕಾರ್ಡಿನ ವಿವರ ಒದಗಿದ್ದು, ಬಳಿಕ ಅವರ ಕ್ರೆಡಿಟ್ ಕಾರ್ಡ್‌ನಿಂದ ಅದೇ ದಿನ ಕ್ರಮವಾಗಿ 20,290 ರೂ., 15,217ರೂ. ಹಾಗೂ 3,554 ರೂ. ಸೇರಿದಂತೆ ಒಟ್ಟು 39,061 ರೂ. ಹಣವನ್ನು ಯಾರೋ ಅಪರಿಚಿತ ವ್ಯಕ್ತಿ ಇವರ ಗಮನಕ್ಕೆ ಬಾರದಂತೆ ಅನಧಿಕೃತ ವಾಗಿ ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿಕೊಂಡಿದ್ದರು. ಮೋಸ ಹೋಗಿರುವ ವಸಂತ ಶೆಟ್ಟಿ ಅವರು ಈಗ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತಿದ್ದಾರೆ.
Kshetra Samachara
16/07/2022 06:20 pm