ವಿಟ್ಲ: ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ಕಾರು ಹೊಳೆಗೆ ಬಿದ್ದು ಇಬ್ಬರು ನಾಪತ್ತೆಯಾಗಿದ್ದು, ಅವರ ಪೈಕಿ ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ ನಿವಾಸಿ ಧನುಷ್ ಎಂಬಾತ ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಧನುಷ್ ಅವರ ತಂದೆ ಚೋಮ ನಾಯ್ಕ ಅವರು ವಿಟ್ಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ವಿಟ್ಲ ಮುಡ್ನೂರು ಗ್ರಾಮದ ಶಾಂತಿಯಡ್ಕ ನಿವಾಸಿ ಧನುಷ್(25)/ ವರ್ಷ ಎಂಬಾತನು ನಿನ್ನೆ ಜುಲೈ09 ರಂದು ರಾತ್ರಿ ಬಂಟ್ವಾಳ ತಾಲೂಕು ವಿಟ್ಲಪಡ್ನೂರು ಗ್ರಾಮದ ಶಾಂತಿಯಡ್ಕ ಎಂಬಲ್ಲಿರುವ ಮನೆಯಿಂದ ತನ್ನ ಮಾರುತಿ ಕಾರ್‌ನಲ್ಲಿ ಕನ್ಯಾನದ ಧನು ಎಂಬವರು ವಿಟ್ಲ, ಕಡಂಬು ಕಡೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದಾರೆ. ನಂತರ ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿದೆ. ಈವರೆಗೆ ಮಗ ಮನೆಗೆ ಬಂದಿರುವುದಿಲ್ಲ. ನಂತರ ಕಾಣೆಯಾದ ಮಗ ಧನುಷ್ ಬಗ್ಗೆ ಸಂಬಂಧಿಕರಲ್ಲಿ, ಸ್ನೇಹಿತರಲ್ಲಿ ವಿಚಾರಿಸಿದಾಗ ಆತನ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಮನೆಗೂ ಬಾರದೆ ,ಸಂಬಧಿಕರ ಹಾಗೂ ಗೆಳೆಯರ ಮನೆಗೂ ಹೋಗದೆ ಕಾಣೆಯಾಗಿರುವ ಮಗ ಧನುಷ್ ನನ್ನು ಪತ್ತೆ ಮಾಡಿ ಕೊಡಬೇಕೆಂದು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Kshetra Samachara
10/07/2022 09:25 pm