ಕಾರ್ಕಳ: ದನಗಳನ್ನು ಕದ್ದು ಅವುಗಳನ್ನು ಹತ್ಯೆಗೈದು ಮಾಂಸ ಮಾರಾಟ ಮಾಡುತ್ತಿದ್ದ ಮೂವರನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.
ಸಾಣೂರು ಮೈಲೊಟ್ಟು ನಿವಾಸಿ ಅಬ್ದುಲ್ ರಹಿಮಾನ್(30), ಸಾಣೂರು ನಿವಾಸಿ ರಜಾಕ್ ಹಾಗೂ ಶರೀಫ್ ಬಂಧಿತ ಆರೋಪಿಗಳು. ಸಾಣೂರು ಗ್ರಾಮದ ಸಾಣೂರು ಸೇತುವೆಯ ಬಳಿಯ ಅಬ್ದುಲ್ ರಹಿಮಾನ್ ಮನೆಯ ಶೆಡ್‌ನಲ್ಲಿ ಕಳವು ಮಾಡಿ ತಂದ ದನವನ್ನು ಕಡಿದು ಮಾರಾಟ ಮಾಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ತಕ್ಷಣವೇ ಕಾರ್ಕಳ ನಗರ ಠಾಣಾ ಪಿಎಸ್‌ಐ ಪ್ರಸನ್ನ ನೇತೃತ್ವದಲ್ಲಿ ಪೊಲೀಸ್ ತಂಡವು ಶುಕ್ರವಾರ ಸಂಜೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 10 ಸಾವಿರ ರೂ ಮೌಲ್ಯದ 27 ಕೆಜಿ ದನದ ಮಾಂಸ ಹಾಗೂ ಕತ್ತಿ, ದನ ಸಾಗಾಟಕ್ಕೆ ಬಳಸಲಾದ ಗೂಡ್ಸ್ ವಾಹನ ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಎಎಸೈ ದಾಮೋದರ, ಕಾನ್ಸ್‌ಟೇಬಲ್ ಗಳಾದ ಸಿದ್ದರಾಯಪ್ಪ, ಪ್ರತಾಪ್ ಹಾಗೂ ಪ್ರಭು ಅಥಣಿ ಪಾಲ್ಗೊಂಡಿದ್ದರು.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Kshetra Samachara
09/07/2022 09:37 am