ಬಂಟ್ವಾಳ: 70 ವರ್ಷದ ಮಹಿಳೆಯೊಬ್ಬರನ್ನು ಆಕೆಯ ಮಗ ಮತ್ತು ಸೊಸೆ ಶೌಚಗೃಹದಲ್ಲಿ ಕೂಡಿ ಹಾಕಿ ಅಮಾನವೀಯವಾಗಿ ವರ್ತಿಸಿದ ಘಟನೆ ಬಂಟ್ವಾಳ ತಾಲೂಕಿನ ಬೆಂಜನಪದವಿನ ಕರಾವಳಿಸೈಟ್ ಎಂಬಲ್ಲಿ ನಡೆದಿದೆ. ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2020ರ ಜನವರಿ 10ರಿಂದ 2022ರ ಜುಲೈ 6ರವರೆಗೆ ಮಹಿಳೆಗೆ ದೌರ್ಜನ್ಯ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಗಿರಿಜಾ ಎಂಬಾಕೆ ತನ್ನ ಮಗ ಹರಿರಾಮ್ ಮತ್ತು ಸೊಸೆ ಪೂಜಾ ವಿರುದ್ಧ ಈ ಕುರಿತು ದೂರು ನೀಡಿದ್ದಾರೆ. ಮಗ ಮತ್ತು ಸೊಸೆಯೊಂದಿಗೆ ವಾಸವಾಗಿರುವ ಅವರು, ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಬೆಂಜಪದವು ಎಂಬಲ್ಲಿರುವ ಅವರ ಮನೆಯ ಜಗುಲಿಯಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದರು.
ಗಾಯಕ್ಕೆ ಮಗ ಮತ್ತು ಸೊಸೆ ಚಿಕಿತ್ಸೆ ಕೊಡಿಸದ ಕಾರಣ, ಬಿದ್ದು ಉಂಟಾದ ನೋವಿನಿಂದ ನಡೆಯಲು ಸಾಧ್ಯವಾಗದೆ ಹಾಸಿಗೆಯಲ್ಲಿ ಮಲಗುವ ಪರಿಸ್ಥಿತಿ ಉಂಟಾಯಿತು. ಆದರೆ ಯಾವುದೇ ಆರೈಕೆ ಮಾಡದೆ ಅವರ ಮನೆಯ ಶೌಚಗೃಹದಲ್ಲಿ ಹಾಕಿ ಒಂದೇ ಹೊತ್ತು ಊಟ ಮತ್ತು ಚಾ ನೀಡುತ್ತಿದ್ದುದಲ್ಲದೆ, ತುಳು ಭಾಷೆಯಲ್ಲಿ 'ಪರಬು ಸೈಪುನಿಲ ಇಜ್ಜಿ' ಮುದುಕಿ ನೀನು ಸಾಯುವುದೂ ಇಲ್ಲ ಎಂಬುದಾಗಿ ಬೈಯುತ್ತಿದ್ದು, ಹಸಿವೆಯಿಂದ ಊಟ ಕೇಳಿದರೆ 'ಪರಬು ನಿಕ್ಕ್ ವನಸ್ ಕೊರ್ಪುಜ್ಜಿ, ಮಣ್ಣ್ ತಿಂದುದು, ಸೈಲ' ಮುದುಕಿ, ನಿನಗೆ ಊಟ ಕೊಡುವುದಿಲ್ಲ, ಮಣ್ಣು ತಿಂದು ಸಾಯಿ ಎಂದು ತುಳು ಭಾಷೆಯಲ್ಲಿ ಸೊಸೆ ಬೈಯುತ್ತಿದ್ದ ವಿಚಾರ ಬುಧವಾರ ಮದ್ಯಾಹ್ನ ಹಿರಿಯ ನಾಗರಿಕ ಸಮಿತಿಗೆ ದೊರಕಿದೆ. ಕೂಡಲೇ ಸ್ಥಳಕ್ಕೆ ಧಾವಿಸಿ, ಶೌಚಗೃಹದಿಂದ ಹೊರಗೆ ಕರೆತಂದು ಉಪಚರಿಸಿ ನಂತರ ವೆನ್ಲಾಕ್ ಆಸ್ಪತ್ರೆಗೆ ಧಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಯಿತು.
Kshetra Samachara
07/07/2022 05:34 pm