ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಅಕ್ರಮ ಸಾಗಾಟ ಜಾನುವಾರು ವಶಕ್ಕೆ; ಐವರು ಅರೆಸ್ಟ್

ಮಂಗಳೂರು: ಹತ್ಯೆ ಮಾಡಿ ಮಾಂಸ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಹೋರಿಯೊಂದರ ಸಹಿತ ಪೊಲೀಸರು ಐವರನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಅಡ್ಡೂರು ಗ್ರಾಮ ನಿವಾಸಿಗಳಾದ ಮಹಮ್ಮದ್ ಜಮಾಲ್(39), ಮಹಮ್ಮದ್ ಶರೀಫ್ (49), ಮಹಮ್ಮದ್ ರಿಯಾಝ್(30), ಮೂಡುಬಿದಿರೆ ತಾಲೂಕಿನ ಅಶ್ವತ್ಥಪುರದ ತೆಂಕ ಮಿಜಾರು ಗ್ರಾಮದ ಆನಂದ ಗೌಡ(52), ಮೋಹನಗೌಡ(49) ಬಂಧಿತ ಆರೋಪಿಗಳು.

ಬಜ್ಪೆ ಠಾಣಾ ವ್ಯಾಪ್ತಿಯ ಕೊಂಪದವು ಎಂಬಲ್ಲಿ ಪಿಕ್ ಅಪ್ ವಾಹನವೊಂದರಲ್ಲಿ ಈ ಹೋರಿಯನ್ನು ಅಕ್ರಮವಾಗಿ ಸಾಗಾಟ ಮಾಡಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಬಜ್ಪೆ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಒಂದು ಹೋರಿ ಹಾಗೂ ಪಿಕ್ ಅಪ್ ವಾಹನವೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ‌. ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

02/07/2022 08:50 pm

Cinque Terre

8.87 K

Cinque Terre

0

ಸಂಬಂಧಿತ ಸುದ್ದಿ