ಉಡುಪಿ: ಬೆಂಗಳೂರಿನ ಜೆ.ಸಿ ನಗರ ಠಾಣೆಯಲ್ಲಿ ಕೆಲವು ದಿನಗಳ ಹಿಂದೆ ದಾಖಲಾಗಿದ್ದ ಪೋಕ್ಸೋ ಪ್ರಕರಣದ ಆರೋಪಿಯನ್ನು ಬೆಂಗಳೂರು ಪೊಲೀಸರು ಶುಕ್ರವಾರ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ವಶಕ್ಕೆ ಪಡೆದಿದ್ದಾರೆ.
ಶ್ರೀನಿವಾಸ್ ಸೆರೆಸಿಕ್ಕ ಆರೋಪಿ. ಎರಡನೆ ಪತ್ನಿಯ ಮೊದಲ ಗಂಡನ 12 ವರ್ಷದ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಆಪಾದನೆಯಡಿ ಈತನ ವಿರುದ್ಧ ದೂರು ದಾಖಲಾಗಿತ್ತು. ಹತ್ತು ದಿನಗಳಿಂದ ತಲೆಮರೆಸಿಕೊಂಡಿದ್ದ ಶ್ರೀನಿವಾಸ್ನನ್ನು ಮಲ್ಪೆ ವೃತ್ತನಿರೀಕ್ಷಕ ಶರಣಗೌಡ, ಮಣಿಪಾಲ ಪಿ.ಎಸ್.ಐ ರಾಜಶೇಖರ ಅವರ ನೆರವು ಪಡೆದು ಮಣಿಪಾಲದಲ್ಲಿ ಬೆಂಗಳೂರು ಪೊಲೀಸರು ವಶಕ್ಕೆ ಪಡೆದು, ಬೆಂಗಳೂರಿಗೆ ಕರೆದೊಯ್ದಿದ್ದಾರೆ.
Kshetra Samachara
02/07/2022 11:34 am