ಬಂಟ್ವಾಳ: ಕದ್ದ ದನಗಳನ್ನು ಕಡಿದು ಮಾಂಸ ಮಾರುತ್ತಿದ್ದ ಆರೋಪದಲ್ಲಿ ತಂದೆ, ಮಗನನ್ನು ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪ ಗೋಳ್ತಮಜಲು ಗ್ರಾಮದ ಮದಕ ಎಂಬಲ್ಲಿ ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.
ಗೋಳ್ತಮಜಲು ನಿವಾಸಿಗಳಾದ ಮಹಮ್ಮದ್ ಇಸ್ಮಾಯಿಲ್ (47) ಮತ್ತು ಆತನ ಮಗ ಸಾಬಿತ್ ಹುಸೈನ್ (18) ಬಂಧಿತ ಆರೋಪಿಗಳು. ಗೋಳ್ತಮಜಲು ಮಹಮ್ಮದ್ ಎಂಬುವರ ಮನೆಯಲ್ಲಿ ಕದ್ದು ತಂದ ದನಗಳನ್ನು ವದೆ ಮಾಡಿ ಬಳಿಕ, ಮಾಂಸ ಮಾರಾಟ ಮಾಡಲಾಗುತ್ತಿತ್ತು ಎಂಬ ಖಚಿತ ಮಾಹಿತಿಯಂತೆ ಬಂಟ್ವಾಳ ನಗರ ಠಾಣಾ ಎಸ್ ಐ.ಅವಿನಾಶ್ ನೇತೃತ್ವದ ನಗರ ಠಾಣಾ ಪೊಲೀಸರ ತಂಡ ಶುಕ್ರವಾರ ಬೆಳಗ್ಗೆ ದಾಳಿ ನಡೆಸಿ, ಮಾಂಸ ಸಹಿತ ಆರೋಪಿಗಳು ಬಂಧಿಸಿದೆ. ದಾಳಿಯ ವೇಳೆ ಅಂದಾಜು 21 ಸಾವಿರ ರೂ. ಮೌಲ್ಯದ 80 ಕೆಜಿ ದನದ ಮಾಂಸ ಹಾಗೂ ಸುಮಾರು 4,500 ರೂ.ಗಳನ್ನು ವಶಪಡಿಸಿಕೊಳ್ಳಲಾಯಿತು. ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
01/07/2022 05:22 pm