ಕುಂದಾಪುರ: ತಾಲೂಕಿನ ಹೆಮ್ಮಾಡಿಯ ಲಾಡ್ಜೊಂದರ ಹಿಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಜುಗಾರಿ ಆಡುತ್ತಿದ್ದ ಎಂಟು ಮಂದಿಯನ್ನು ಕುಂದಾಪುರ ಡಿವೈಎಸ್ಪಿ ಕೆ. ಶ್ರೀಕಾಂತ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
ಅಂದರ್ ಬಾಹರ್ ಆಟವಾಡುತ್ತಿದ್ದಾರೆಂಬ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಗಿದೆ. ವಂಡ್ಸೆಯ ಸಂಜೀವ ಪೂಜಾರಿ (45), ಚಿತ್ತೂರಿನ ಅಭಿಜಿತ್ (29), ಬಳ್ಕೂರಿನ ನರಸಿಂಹ ಪೂಜಾರಿ (61), ಕರ್ಕುಂಜೆಯ ಚಂದ್ರ (49), ಹೆಮ್ಮಾಡಿಯ ಅಶ್ವತ್ (35), ಕರ್ಕುಂಜೆಯ ಅಶೋಕ (50), ತಲ್ಲೂರಿನ ಭುಜಂಗ ಶೆಟ್ಟಿ (44), ನೂಜಾಡಿ ರಸ್ತೆ ನಿವಾಸಿ ಆದರ್ಶ (39) ಬಂಧಿತರು.
ಬಂಧಿತರಿಂದ ಇಸ್ಪೀಟು ಜುಗಾರಿ ಆಟಕ್ಕೆ ಉಪಯೋಗಿಸಿದ 1,61,000 ರೂ. ನಗದು ಸಹಿತ ಇತರ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
29/06/2022 12:41 pm