ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕಿಡ್ನ್ಯಾಪ್ ಆಗಿದೆ 5 ಲಕ್ಷ ಹಣ ಕಳಿಸಿ ಎಂದು ಪೋಷಕರಿಗೆ ಸುಳ್ಳು ಹೇಳಿ ಸಿಕ್ಕಿಬಿದ್ದ ಪುತ್ರರತ್ನ!

ಉಡುಪಿ: ಮಕ್ಕಳು ದಾರಿ ತಪ್ಪಿದರೆ ಏನೆಲ್ಲ ಅವಾಂತರಗಳಾಗುತ್ತವೆ ಎಂಬುದಕ್ಕೆ ಉಡುಪಿಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಪುತ್ರನೊಬ್ಬ ತನ್ನ ಅಪಹರಣ ಆಗಿದೆ 5 ಲಕ್ಷ ಹಣ ಕಳಿಸಿ ಎಂದು ಪೋಷಕರಲ್ಲಿ ಅಪಹರಣದ ನಾಟಕವಾಡಿ ಬಳಿಕ ಪೊಲೀಸರ ಅತಿಥಿಯಾಗಿದ್ದಾನೆ.

ವರುಣ್ ನಾಯಕ್ (25) ಎಂಬಾತನೇ ಅಪಹರಣ ನಾಟಕವಾಡಿದ ಯುವಕ. ಜೂನ್ 26ರಂದು ಮುಂಜಾನೆ ವರುಣ್ ನಾಯಕ್ ದೂರದಿಂದ ತನ್ನ ತಂದೆ ತಾಯಿಗೆ ಮೊಬೈಲ್‌ನಿಂದ ಕರೆ ಮಾಡಿ ತನ್ನನ್ನು ಯಾರೋ ಅಪಹರಿಸಿದ್ದಾರೆ. ತಕ್ಷಣ ಐದು ಲಕ್ಷ ಕಳಿಸಿದರೆ ತನ್ನನ್ನು ಬಿಡುತ್ತಾರೆ ಎಂದು ಬೇಡಿಕೆ ಇಟ್ಟಿದ್ದಾನೆ. ನಿಜ ಇರಬಹುದು ಅಂದುಕೊಂಡ ಪೋಷಕರು ಗಾಬರಿ ಬಿದ್ದು ಉಡುಪಿ ನಗರ ಠಾಣೆಯಲ್ಲಿ ಮಗನ ಅಪಹರಣ ಕುರಿತು ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರುಕಾರ್ಯಪ್ರವೃತ್ತರಾಗುತ್ತಾರೆ. ಆತನ ಮೊಬೈಲ್ ಟವರ್ ಲೊಕೇಷನ್ ಗೋವಾ ತೋರಿಸುತ್ತಿತ್ತು. ಸರಿ ಪೊಲೀಸರು ಗೋವಾಕ್ಕೆ ಹೋಗಿ ನೋಡಿದರೆ ಈ ಯುವಕ ಗೆಳೆಯರ ಜೊತೆ ಮೋಜು ಮಸ್ತಿಯಲ್ಲಿದ್ದಾನೆ. ಈಗ ಬೇಸ್ತು ಬೀಳುವ ಸರದಿ ಪೊಲೀಸರದ್ದಾಗಿತ್ತು. ಪೊಲೀಸರು ಆತನನ್ನು ಕರೆದುಕೊಂಡು ಬಂದು ವಿಚಾರಿಸಿದಾಗ ,ತಾನು ಹಣಕ್ಕಾಗಿ ಅಪಹರಣದ ನಾಟಕ ಆಡಿದ್ದಾಗಿ ಬಾಯಿ ಬಿಡುತ್ತಾನೆ. ಇದೀಗ ಪೊಲೀಸರ ಅತಿಥಿಯಾಗಿರುವ ಈ ಯುವಕನಿಗೆ ಎರಡು ವಾರಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಶಾಲೆಯನ್ನು ಅರ್ಧಕ್ಕೇ ಬಿಟ್ಟಿದ್ದ ಈತ ಮೋಜು ಮಸ್ತಿಗೆ ಹಣಕ್ಕಾಗಿ ಈ ನಾಟಕ ಆಡಿದ್ದು ಇದೀಗ ಕಂಬಿ ಎಣಿಸುತ್ತಿದ್ದಾನೆ.

Edited By : Vijay Kumar
Kshetra Samachara

Kshetra Samachara

28/06/2022 11:16 pm

Cinque Terre

7.77 K

Cinque Terre

2

ಸಂಬಂಧಿತ ಸುದ್ದಿ