ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಬಾವಿಗೆ ಬಿದ್ದು ವೃದ್ಧ ಸಾವು: ಶವ ಮೇಲಕ್ಕೆತ್ತಿದ ಅಗ್ನಿಶಾಮಕ ದಳ

ಬ್ರಹ್ಮಾವರ: ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿದ ವೃದ್ಧರೊಬ್ಬರ ಶವವನ್ನು ಅಗ್ನಿಶಾಮಕ ದಳದವರು ಹಗ್ಗದ ಸಹಾಯದಿಂದ ಮೇಲಕ್ಕೆತ್ತಿದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಉಪ್ಪಿನಕೋಟೆಯ ಸಾಲಿಕೇರಿಯಲ್ಲಿ ನಡೆದಿದೆ. ಸಾಲಿಕೇರಿಯ ಶಂಕರಪ್ರಭು(82) ಬಾವಿಗೆ ಬಿದ್ದು ಸಾವನ್ನಪ್ಪಿದ ದುರ್ದೈವಿ.

ಶಂಕರ ಪ್ರಭು ಅವರು ತೋಟದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದಿದ್ದರು. ಬಾವಿಗೆ ಬಿದ್ದದ್ದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ತಿಳಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದಾಗ, ಶಂಕರ ಪ್ರಭು ಸಾವನ್ನಪ್ಪಿದ್ದರು. ಕೊನೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಬಾವಿಗೆ ಇಳಿದು ಹಗ್ಗದ ಸಹಾಯದಿಂದ ಶಂಕರ ಪ್ರಭು ಅವರ ಮೃತ ದೇಹವನ್ನು ಮೇಲಕ್ಕೆತ್ತಿದ್ದಾರೆ. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagesh Gaonkar
Kshetra Samachara

Kshetra Samachara

28/06/2022 05:35 pm

Cinque Terre

13.36 K

Cinque Terre

0

ಸಂಬಂಧಿತ ಸುದ್ದಿ