ಬೆಳ್ತಂಗಡಿ : ಸ್ಕೂಟರ್ ನಲ್ಲಿ ಹೋಗುತ್ತಿದ್ದ ವಿವಾಹಿತ ಮಹಿಳೆಯನ್ನು ಆಟೋ ಚಾಲಕನೊಬ್ಬ ನಡುರಸ್ತೆಯಲ್ಲಿ ಸ್ಕೂಟರ್ ಅಡ್ಡಹಾಕಿ ಚೂರಿಯಿಂದ ಇರಿದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಚಾರ್ಮಾಡಿಯಲ್ಲಿ ವಶಕ್ಕೆ ಪಡೆಯಲಾಗಿದೆ.
ಸೋಮವಾರ ಸಂಜೆ ಸ್ಕೂಟರ್ ನಲ್ಲಿ ಹೋಗುತ್ತಿದ್ದ ಬಂಟ್ವಾಳ ಗ್ರಾಮದ ಅನಂತಾಡಿ ನಿವಾಸಿ ಮಹಿಳೆ ಶಕುಂತಾಳ(35) ವಿಟ್ಲ ಸಮೀಪದ ಮಾಣಿಯ ನೇರಳಕಟ್ಟೆಯಲ್ಲಿ ಚೂರಿಯಿಂದ ಇರಿದು ಕೊಲೆ ಮಾಡಿದ ಬಳಿಕ ಆಟೋದಲ್ಲಿ ಬೆಳ್ತಂಗಡಿ ಮೂಲಕ ಚಾರ್ಮಾಡಿ ಘಾಟ್ ಮೂಲಕ ಚಿಕ್ಕಮಗಳೂರು ಕಡೆಗೆ ಪರಾರಿಯಾಗುತ್ತಿದ್ದ ಕೊಲೆ ಮಾಡಿದ ಆರೋಪಿ ಆಟೋ ಚಾಲಕ ಶ್ರೀಧರ್ ಎಂಬತನನ್ನು ವಿಟ್ಲ ಪೊಲೀಸರ ಖಚಿತ ಮಾಹಿತಿ ಮೇರೆಗೆ ಧರ್ಮಸ್ಥಳ ಪಿಎಸ್ಐ ಕೃಷ್ಣಕಾಂತ್ ಪಾಟೀಲ್ ಮತ್ತು ತಂಡ ಘಟನೆ ನಡೆದ ಮೂರು ಗಂಟೆಯೊಳಗಾಗಿ ಚಾರ್ಮಾಡಿಯ ಚೆಕ್ ಪೋಸ್ಟ್ ಬಳಿ ಆಟೋ ಸಮೇತ ವಶಕ್ಕೆ ಪಡೆದು ವಿಟ್ಲ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣೆಯ ದಕ್ಷ ಪಿಎಸ್ಐ ಕೃಷ್ಣಕಾಂತ್ ಪಾಟೀಲ್ ಮತ್ತು ತಂಡದ ಮಹಮ್ಮದ್ ಅಸ್ಲಾಂ, ಪ್ರಶಾಂತ್, ಟ್ರಾಫಿಕ್ ಸಿಬ್ಬಂದಿ ಪ್ರವೀಣ್, ಚಾಲಕರಾದ ಲೋಕೇಶ್ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
Kshetra Samachara
28/06/2022 08:59 am