ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ: ಆತ್ಮಹತ್ಯೆಗೈಯಲು ಸಮುದ್ರಕ್ಕೆ ಧುಮುಕಿದ ಮಹಿಳೆಯನ್ನು ರಕ್ಷಿಸಿದ ಲೈಫ್ ಗಾರ್ಡ್ ಗಳು!

ಮಲ್ಪೆ: ಆತ್ಮಹತ್ಯೆಗೈಯಲು ಸಮುದ್ರಕ್ಕೆ ಧುಮುಕಿದ ಮಹಿಳೆಯೊಬ್ವರನ್ನು ಮಲ್ಪೆ ಬೀಚ್ ನ ಲೈಫ್ ಗಾರ್ಡ್‌ಗಳು ರಕ್ಷಣೆ ಮಾಡಿ ಪೊಲೀಸರ ವಶಕ್ಕೆ ನೀಡಿದ ಪ್ರಸಂಗ ನಿನ್ನೆ ಸಂಜೆ ನಡೆದಿದೆ.

ಮುಂಬಯಿ ಮೂಲದವರು ಎನ್ನಲಾದ ಈ ಮಹಿಳೆ 15 ವರ್ಷದ ಮಗನೊಂದಿಗೆ ಮಲ್ಪೆ ಬೀಚ್ ಗೆ ಆಗಮಿಸಿದ್ದರು.ಮಳೆಗಾಲದಲ್ಲಿ ಬೀಚ್‌ಗೆ ಇಳಿಯದಂತೆ ತಡೆ ಬೇಲಿ ಹಾಕಿದ್ದರೂ ಮಹಿಳೆ ಆತ್ಮಹತ್ಯೆ ಮಾಡುವ ಉದ್ದೇಶದಿಂದ ಕಡಲ ಮಧ್ಯ ಭಾಗಕ್ಕೆ ಹೋಗಲು ಯತ್ನಿಸಿದ್ದಾರೆ.

ಸ್ಥಳದಲ್ಲಿದ್ದ ಲೈಫ್ ಗಾರ್ಡ್ ಗಳು ತಕ್ಷಣ ಧಾವಿಸಿ ಮಹಿಳೆಯನ್ನು ವಾಪಾಸು ಕರೆತಂದಿದ್ದಾರೆ.ಬಳಿಕ ಮಲ್ಪೆ ಪೊಲೀಸರಿಗೆ ಮಹಿಳೆ ಮತ್ತವರ 15 ವರ್ಷದ ಮಗನನ್ನು ಹಸ್ತಾಂತರಿಸಲಾಯಿತು.ಮಲ್ಪೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Edited By : Nagesh Gaonkar
PublicNext

PublicNext

27/06/2022 08:02 am

Cinque Terre

54.6 K

Cinque Terre

0

ಸಂಬಂಧಿತ ಸುದ್ದಿ