ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಬಿದ್ರಿ: ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಕಳವು- ನಗದು, ಬೆಳ್ಳಿ ತಟ್ಟೆ ಕಳ್ಳತನ!

ಪಡುಬಿದ್ರಿ: ಇಲ್ಲಿನ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾಣಿಕೆ ಡಬ್ಬದಿಂದ 15,000 ರೂ. ಹಾಗೂ 500 ರೂ. ಬೆಲೆಬಾಳುವ ಬೆಳ್ಳಿಯ 2 ತಟ್ಟೆಗಳನ್ನು ಕಳ್ಳತನ ಮಾಡಲಾಗಿದೆ.

ಕಳ್ಳರು ಧ್ವಜಸ್ತಂಭದ ಮೇಲೇರಿ ದೇಗುಲದ ಒಳಗೆ ಪ್ರವೇಶಿಸಿದ್ದು, ಹೊರ ಹೋಗುವಾಗ ಪಶ್ಚಿಮದ ಮುಖ್ಯದ್ವಾರ ತೆರೆದುಕೊಂಡು ಹೋಗಿದ್ದಾರೆ.

ಶ್ರೀ ಗಣಪತಿ ದೇವರ ಗುಡಿಯ ಒಳಗೆ ಪ್ರವೇಶಿಸಿದ ಕಳ್ಳರು ಗಣಪತಿಯ ಶಿಲಾಮೂರ್ತಿಯ ಮುಖವಾಡಕ್ಕೆ ಇಡಲಾದ ಪಂಚಲೋಹದ ತಗಡು ಹಾಗೂ ಪಾಣಿಪೀಠದ ಕವಚಗಳನ್ನು ತೆಗೆದು ಅಲ್ಲೇ ಬಿಟ್ಟು ಹೋಗಿದ್ದಾರೆ. ದ್ವಾರದಲ್ಲಿದ್ದ ಎರಡು ಲಾಕರ್ ಕಾಣಿಕೆ ಡಬ್ಬಿಯನ್ನು ಒಡೆಯಲು ಯತ್ನಿಸಿದ್ದು ಕಂಡು ಬಂದಿದೆ. ದೇಗುಲದ ಕಚೇರಿಯ ಬೀರುವನ್ನು ಮುರಿದು ಜಾಲಾಡಿದ್ದಾರೆ. ಅಲ್ಲಿಂದ ಎರಡು ಬೆಳ್ಳಿಯ ತಟ್ಟೆಗಳನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Edited By : Shivu K
Kshetra Samachara

Kshetra Samachara

20/06/2022 10:44 am

Cinque Terre

16.5 K

Cinque Terre

0

ಸಂಬಂಧಿತ ಸುದ್ದಿ