ಉಡುಪಿ :ಉಡುಪಿಯಲ್ಲಿ ಇವತ್ತು ಬೆಳ್ಳಂಬೆಳಿಗ್ಗೆ ಎಸಿಬಿ ದಾಳಿ ನಡೆದಿದ್ದು ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ಮನೆಯಲ್ಲಿ ರಾಶಿ ರಾಶಿ ಚಿನ್ನಾಭರಣಗಳು ಪತ್ತೆಯಾಗಿದ್ದು,ಪಬ್ಲಿಕ್ ನೆಕ್ಸ್ಟ್ ಗೆ ಈ ಕುರಿತ ಫೋಟೋಗಳು ಲಭ್ಯವಾಗಿವೆ.ಭಾರೀ ಪ್ರಮಾಣದ ಚಿನ್ನಾಭರಣಗಳ ಜೊತೆಗೆ ನಗದು ಕೂಡ ಪತ್ತೆಯಾಗಿದೆ.
ಸಣ್ಣ ನೀರಾವರಿ ಇಲಾಖೆ ಅಸಿಸ್ಟೆಂಟ್ ಇಂಜಿನಿಯರ್ ಹರೀಶ್ ಅವರ ನಿವಾಸ ಉಡುಪಿಯ ಕೊರಂಗ್ರಪಾಡಿಯಲ್ಲಿದೆ.ಇಲ್ಲಿರುವ ನಿವಾಸಕ್ಕೆ ದಾಳಿ ನಡೆಸಿದ ಅಧಿಕಾರಿಗಳು ಮನೆಯೊಳಗೆ ಜಾಲಾಡಿದ್ದಾರೆ.
ಈ ವೇಳೆ ಎಸಿಬಿ ಡಿವೈಎಸ್ ಪಿ ಮಂಜುನಾಥ ಕವರಿ ನೇತೃತ್ವದ ತಂಡಕ್ಕೆ ಭಾರೀ ಪ್ರಮಾಣದ ಸಂಪತ್ತು ಮತ್ತು ದಾಖಲೆಗಳು ಸಿಕ್ಕಿವೆ. ಇವತ್ತು ಇಡೀ ದಿನ ತಪಾಸಣೆ ಮುಂದುವರೆಯುವ ಸಾಧ್ಯತೆಗಳಿವೆ.
PublicNext
17/06/2022 09:39 am