ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ತಂಗಡಿ:ಅತ್ತೆಯ ಕಿರುಕುಳಕ್ಕೆ ‌ಆತ್ಮಹತ್ಯೆಗೆ ಯತ್ನ:ಪೋಲಿಸರ ಸಮಯಪ್ರಜ್ಞೆಗೆ ಪಾರಾದ ಮಗು,ತಾಯಿ!

ಬೆಳ್ತಂಗಡಿ : ಅತ್ತೆಯ ಕಿರುಕುಳದಿಂದ ಮನನೊಂದು ಎರಡು ವರ್ಷದ ಮಗುವಿನ ಜೊತೆ ಅತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಧರ್ಮಸ್ಥಳ ಪೊಲೀಸರು ಪಾರು ಮಾಡಿದ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ.

ಮಡಿಕೇರಿಯ ಶುಂಠಿಕೊಪ್ಪ ಸಮೀಪದ ಗರಗಂದೂರು ಗ್ರಾಮದ ಮಲ್ಲಿಕಾರ್ಜುನ ಕಾಲೊನಿ ಮಹಿಳೆ ಮನೆಯಲ್ಲಿ ಅತ್ತೆಯ ಕಿರುಕುಳದಿಂದ ಬೇಸತ್ತಿದ್ದರು ದಿ.14 ರಂದು ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಮಗುವಿನ ಜೊತೆ ಮನೆ ಬಿಟ್ಟಿದ್ದ ಮಹಿಳೆ ಸಂಜೆಯಾದರು ಮನೆಗೆ ಹಿಂತಿರುಗಿ ಬರಲಿಲ್ಲ ಅನುಮಾನ ಬಂದ ಕುಟುಂಬಸ್ಥರ ಮಹಿಳೆಯ ಪತ್ತೆಗಾಗಿ ಶುಂಠಿಕೊಪ್ಪ ಪೋಲಿಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಿ ಸ್ನೇಹಿತರಿಗೆ ಮಾಹಿತಿ ನೀಡಿದ್ದರು.

ಧರ್ಮಸ್ಥಳದ ನೇತ್ರಾವತಿ ನದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಏನಾದರೂ ಹೋಗಿರುವ ಶಂಕೆ ವ್ಯಕ್ತಪಡಿಸಿದ ಕುಟುಂಬಸ್ಥರು ಸ್ನೇಹಿತನ ಸಹಕಾರದ ಜೊತೆ ಧರ್ಮಸ್ಥಳ ಪೋಲಿಸರಿಗೆ ಮಾಹಿತಿ ನೀಡಿದ್ದರು.ಕೂಡಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್ಐ ಕೃಷ್ಣಾಕಾಂತ್ ಪಾಟೀಲ್ ಮತ್ತು ಹೆಡ್ ಕಾನ್ಸಟೇಬಲ್ ಶೇಷಣ್ಣ ತಂಡ ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ಮಡಿಕೇರಿಯಿಂದ ಬರುವ ಬಸ್ ಗಳಲ್ಲಿ ಹುಡುಕಾಟ ನಡೆಸಿದ್ದಾರೆ.

ಮಡಿಕೇರಿಯಿಂದ ಧರ್ಮಸ್ಥಳಕ್ಕೆ ಬರುವ ಬಸ್ ನಲ್ಲಿ ಮಗುವಿನ ಜೊತೆ ಮಹಿಳೆಯನ್ನು ಕಂಡು ಪೊಲೀಸ್ ಠಾಣೆಗೆ ಕರೆದೊಯ್ಯುದು ಮಹಿಳೆಯನ್ನು ವಿಚಾರಣೆ ನಡೆಸಿದ್ದು ಅತ್ತೆಯ ಕಿರುಕುಳದಿಂದ ಧರ್ಮಸ್ಥಳದ ನೇತ್ರಾವತಿ ಸ್ನಾನಘಟದಲ್ಲಿ ಆತ್ಮಹತ್ಯೆ ಯತ್ನಿಸಿರುವ ವಿಷಯವನ್ನು ಸ್ವತಃ ‌ಮಹಿಳೆ ಬಾಯಿಬಿಟ್ಟಿದ್ದಾಳೆ.ಬಳಿಕ ಕುಟುಂಬಸ್ಥರಿಗೆ ಮಗು ಮತ್ತು ತಾಯಿಯನ್ನ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ.

Edited By :
Kshetra Samachara

Kshetra Samachara

16/06/2022 03:26 pm

Cinque Terre

9.38 K

Cinque Terre

1

ಸಂಬಂಧಿತ ಸುದ್ದಿ