ಕುಂದಾಪುರ: ಮನೆಯ ಕಪಾಟಿನಲ್ಲಿಟ್ಟಿದ್ದ ಚಿನ್ನಾಭರಣಕಳವಾದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆದಿದೆ. ನರಸಿಂಹ ಗಾಣಿಗ ಎಂಬವರ ಮನೆಯಲ್ಲಿ ಕಳವು ನಡೆದಿದ್ದು, ಮನೆ ಕೆಲಸದಾಕೆ ಕಳವು ಮಾಡಿರಬಹುದು ಎಂದು ಶಂಕಿಸಿ ದೂರು ದಾಖಲಾಗಿದೆ.
ಉಡುಪಿಯ ಕೊರಂಗ್ರಪಾಡಿ ನಿವಾಸಿ ಮಂಜುಳಾ, ನರಸಿಂಹ ಗಾಣಿಗ ಅವರ ಮನೆಯಲ್ಲಿ ಕೆಲಸಕ್ಕಿದ್ದಳು. ಮೇ 25ರಂದು ತನ್ನ ಮನೆಗೆ ಹೋಗಿ ಬರುದಾಗಿ ಹೋದವಳು ವಾಪಾಸು ಬರಲಿಲ್ಲ, ಮೇ 27 ರಂದು ಕಪಾಟು ತೆರೆದು ನೋಡಿದಾಗ 28 ಗ್ರಾಂ ತೂಕದ 2 ಚಿನ್ನದ ಬಳೆ ನಾಪತ್ತೆ ಆಗಿರುವುದು ಕಂಡು ಬಂದಿದೆ.
ಕೆಲಸದಾಕೆ ಮಂಜುಳಾಳನ್ನು ವಿಚಾರಿಸಿದಾಗ ಸಮರ್ಪಕ ಉತ್ತರ ನೀಡಲಿಲ್ಲ. ಹೀಗಾಗಿ ಮಂಜುಳಾ ಕಳವು ಮಾಡಿರಬಹುದು ಎಂದು ಶಂಕಿಸಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
Kshetra Samachara
16/06/2022 12:00 pm