ಬಂಟ್ವಾಳ: ಸಂಗಬೆಟ್ಟು ಗ್ರಾಮದ ಸಿದ್ದಕಟ್ಟೆ ಎಂಬಲ್ಲಿ ಜೂನ್ 11ರಿಂದ 13ರ ಮಧ್ಯೆ ಮನೆಯೊಂದರಲ್ಲಿ ಕಳವು ನಡೆದ ಪ್ರಕರಣವೀಗ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಸಿದ್ಧಕಟ್ಟೆಯ ಶ್ರೀಮಂಗಳ ಉರ್ಬನ್ ಕಂಪೌಂಡ್‌ನಲ್ಲಿ ವಾಸಿಸುತ್ತಿರುವ ಚಂದ್ರಶೇಖರ್ ಮೂಡುಬಿದಿರೆಯಲ್ಲಿ ಕೆಲಸದಲ್ಲಿದ್ದು, ಪತ್ನಿಗೆ ಜ್ವರ ವಿದ್ದುದರಿಂದ ಪತ್ನಿ, ಮಗಳೊಂದಿಗೆ ಮೂಡಬಿದ್ರೆಯ ರಿಂಗ್ ರೋಡ್‌ನಲ್ಲಿರುವ ತಾಯಿ ಮನೆಗೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಮನೆಗೆ ಬೀಗ ಹಾಕಲಾಗಿತ್ತು. ಜೂನ್ 13ರಂದು ಬಂದು ನೋಡಿದಾಗ ಮನೆಯ ಮುಂಬಾಗಿಲು ತೆರೆದಿದ್ದು ಗಾಬರಿಗೊಂಡು ಒಳಗೆ ಹೋಗಿ ನೋಡಿದಾಗ ಡೈನಿಂಗ್ ಹಾಲ್‌ನ ಎಡಬದಿಯಲ್ಲಿರುವ ಶೋಕೇಸ್ ಡ್ರಾವರ್‌ಗಳನ್ನು ಎಳೆದು ಚೆಲ್ಲಾಪಿಲ್ಲಿ ಮಾಡಿದ್ದು ಕಂಡು ಬಂದಿದೆ.
ಕೊಣೆಯಲ್ಲಿ ಕಪಾಟನ್ನು ಮುರಿದು ಅದರೊಳಗಿರುವ ಸುಮಾರು 20,000 ರೂ. ಬೆಲೆಯ ರಾಡ್ಯೋ ವಾಚ್ ಅನ್ನು ಕಳವು ಮಾಡಿದ್ದು, ಅಲ್ಲದೇ ಒಟ್ಟು ಅಂದಾಜು ಮೌಲ್ಯ 1,56,000 ರೂ. ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
15/06/2022 07:17 pm