ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ: ಕೊಲೆ ಶಂಕೆ

ಉಪ್ಪುಂದ: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕಂಬದಕೋಣೆ ಮಂಜುನಾಥ ದೇವಾಡಿಗ (38) ಅವರು ಜೂ. 9ರಂದು ಕೆರ್ಗಾಲು ಗ್ರಾಮದ ನಾಯ್ಕನಕಟ್ಟೆ ರಾ.ಹೆ. 66ರ ಬಳಿ ಶವವಾಗಿ ಪತ್ತೆಯಾಗಿದ್ದಾರೆ.

ಮಂಜುನಾಥ ದೇವಾಡಿಗ ಜೂ. 6ರ ಬೆಳಗ್ಗೆ ಮನೆಯಿಂದ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದರು. ರಾತ್ರಿ ಮನೆಗೆ ಬಾರದೆ ಇದ್ದಾಗ ಅವರಿಗೆ ಫೋನ್‌ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಈ ಬಗ್ಗೆ ಜೂ. 8ರಂದು ಬೈಂದೂರು ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು.

ಜೂ. 9ರಂದು ನಾಯ್ಕನಕಟ್ಟೆಯ ರಾ.ಹೆ. 66ರ ಸಮೀಪ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಮನೆಮಂದಿ ಗುರುತು ಪತ್ತೆ ಮಾಡಿದ್ದಾರೆ. ವಾದ್ಯ ಹಾಗೂ ಕೂಲಿ ಕೆಲಸ ಮಾಡಿಕೊಂಡಿದ್ದ ಮಂಜುನಾಥ ಅವರಿಗೆ ಇಬ್ಬರು ಮಕ್ಕಳಿದ್ದಾರೆ.

ಮೂರು ದಿನಗಳ ಹಿಂದೆ ಮಂಜುನಾಥ ಅವರು ಕಾಣೆಯಾದಾಗ ಅವರ ಪತ್ನಿ ಮನೆಯವರು ದೈವದ ಬಳಿ ಕಾಣೆಯಾದ ಬಗ್ಗೆ ಕೇಳಿದಾಗ “ಅವನು ನನ್ನ ಸರಹದ್ದಿನಲ್ಲಿಯೇ ಇದ್ದು, ಇನ್ನೆರಡು ದಿನದಲ್ಲಿ ಸಿಗುವಂತೆ ಮಾಡುವುದಾಗಿ ನುಡಿದಿತ್ತು. ದೈವದ ನುಡಿ ನಿಜವಾಯಿತು ಎಂದು ಜನರಾಡಿಕೊಳ್ಳುತ್ತಿದ್ದಾರೆ.ಬೈಂದೂರು ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

10/06/2022 06:32 pm

Cinque Terre

12.28 K

Cinque Terre

0

ಸಂಬಂಧಿತ ಸುದ್ದಿ