ಮುಲ್ಕಿ: ಕೇರಳ ಮೂಲದ ನಿವಾಸಿ ಗಳಾದ ಜಲಜ ಸುರೇಶ್ ಮತ್ತು ಅವರ ಪತಿ ಫೆ.23 ರಂದು ಗುಜರಾತ್‌ನ ವಾಪಿಯಿಂದ ತ್ರಿಶೂರ್ ಕಡೆಗೆ ಇಂದೋರ್ ಕೊಚ್ಚುವೆಲಿ 2 ಎಕ್ಸ್‌ಪ್ರೆಸ್ ಎಂಬ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ 4.58 ಗಂಟೆಯಿಂದ ಫೆ. 24 ರ 2.15 ಗಂಟೆಯ ಮದ್ಯಾವಧಿ ಯಲ್ಲಿ ಯಾರೋ ಕಳ್ಳರು ಜಲಜ ಸುರೇಶ್ ತಲೆಯ ಬಳಿ ಇಟ್ಟಿದ್ದ ಬ್ಯಾಗ್‌ನಲ್ಲಿ ಇದ್ದ ಚಿನ್ನದ ಸರ, ತಾಳಿಯೊಂದಿಗೆ ಇದ್ದ ಚಿನ್ನದ ಸರ, ಚಿನ್ನದ ಬಳೆ, ತಲಾ 8 ಗ್ರಾಂ ತೂಕದ ಒಟ್ಟು 16 ಗ್ರಾಂ ತೂಕದ ಚಿನ್ನದ ಬಳೆಗಳು, ಉಂಗುರ, ಕಿವಿಯೋಲೆ, ಸ್ಯಾಮ್ ಸಂಗ್ ಕಂಪನಿಯ ಎಸ್ ಎಮ್ ಎಮ್ 115/ಡಿಎಸ್ ಮೊಬೈಲ್ ಪೋನ್, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಎಸ್‌ಬಿಐ ಫೆಡರಲ್ ಬ್ಯಾಂಕಿನ ಎಟಿಎಮ್ ಕಾರ್ಡ್ ಗಳನ್ನು ಕಳವು ಮಾಡಿದ್ದಾರೆ
ಫೆ 24 ರಂದು 2.15 ಗಂಟೆಗೆ ಮುಲ್ಕಿ ಎಂಬಲ್ಲಿ ರೈಲು ತಲುಪಿದಾಗ ಜಲಜ ಸುರೇಶ್ ರಿಗೆ ಕಳ್ಳತನ ವಾಗಿದ್ದು ಅರಿವಿಗೆ ಬಂದಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ. ಕಳವಾದ ಚಿನ್ನಾಭರಣಗಳ ಒಟ್ಟು ಮೌಲ್ಯವು 3,10,000/- ರೂ ಆಗಿದ್ದು ಕಳವಾದ ಮೊಬೈಲಿನ ಮೌಲ್ಯವು 13,000/- ರೂ ಆಗಿದ್ದು ಈ ಬಗ್ಗೆ ತ್ರೀಶೂರ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಬರೋಬ್ಬರಿ ಮೂರು ತಿಂಗಳ ಬಳಿಕ ಜೂನ್ 6ರಂದು ಮುಲ್ಕಿ ಠಾಣೆಗೆ ಪ್ರಕರಣ ವರ್ಗಾವಣೆ ಗೊಂಡಿದೆ.
Kshetra Samachara
06/06/2022 10:44 pm