ಬೆಳ್ತಂಗಡಿ: ಕಳ್ಳರ ಕೈಚಳಕ ಮತ್ತೆ ಮುಂದುವರೆದಿದ್ದು, ಬೆಳ್ತಂಗಡಿ ನಗರದ ಮೂರು ಮಾರ್ಗದ ಬಳಿ ಇರುವ ಎರಡು ಕಡೆ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.
ಬೆಳ್ತಂಗಡಿಯ ಮೂರು ಮಾರ್ಗದಲ್ಲಿರುವ ದಿವಾಕರ್ ಪ್ರಭು ಅವರ ಮಾಲೀಕತ್ವದ ಗಣೇಶ್ ಹೋಟೆಲ್ ಮತ್ತು ಚೇತನ್ ಎಂಬುವರ ಮಾಲೀಕತ್ವದ ನಕ್ಷತ್ರ ಮೊಬೈಲ್ ಅಂಗಡಿಗೆ ಕಳ್ಳರು ನುಗ್ಗಿದ್ದಾರೆ. ಈ ವೇಳೆ ವಿವೋ ಕಂಪನಿಯ ಎರಡು ಹೊಸ ಮೊಬೈಲ್ ಫೋನ್ ಮತ್ತು ರಿಪೇರಿ ಮಾಡಿ ಇಟ್ಟಿದ್ದ ಎರಡು ಮೊಬೈಲ್ ಫೋನ್ ಕಳ್ಳತನ ಮಾಡಲಾಗಿದೆ. ವಿವೋ ಮೊಬೈಲ್ 18 ಸಾವಿರ ಮತ್ತು 16 ಸಾವಿರ ರೂಪಾಯಿ ಮೌಲ್ಯವಾಗಿದೆ ಎನ್ನಲಾಗಿದೆ.
ಗಣೇಶ್ ಹೋಟೆಲ್‌ನಲ್ಲಿರುವ ಸಿಸಿಟಿವಿ ಡಿವಿಆರ್ ಮತ್ತು ಕ್ಯಾಸ್‌ನಲ್ಲಿದ್ದ 3,500 ರೂ. ಕಳ್ಳತನ ಮಾಡಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
Kshetra Samachara
06/06/2022 12:21 pm