ಉಳ್ಳಾಲ: ದೇರಳಕಟ್ಟೆ ಯೆನೆಪೋಯ ಆಸ್ಪತ್ರೆ ಬಳಿ ನಿಲ್ಲಿಸಿದ್ದ ಬೈಕ್ ಕಳವು ನಡೆಸಿದ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬುಧವಾರ ಬಂಧಿಸಿ ಬೈಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಕಾಸರಗೋಡಿನ ಚೆರ್ಕಳ ನಿವಾಸಿ ಅಬ್ದುಲ್ ರಶೀದ್ (23) ಕುಂಜಾರುಪ್ಪಾರ ನಿವಾಸಿ ಅಬ್ದುಲ್ ಶಬೀರ್ (21) ಬಂಧಿತರು.
ಕಳೆದ ಎ.25 ರಂದು ಉಳ್ಳಾಲ ಠಾಣಾ ವ್ಯಾಪ್ತಿಯ ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಯ ಪಾರ್ಕಿಂಗ್ ನಲ್ಲಿ ನಿಲ್ಲಿಸಲಾಗಿದ್ದ ಬಗಂಬಿಲ ನಿವಾಸಿ ರಂಜಿತ್ ಎಂಬವರಿಗೆ ಸೇರಿದ್ದ ಬೈಕ್ ಕಳವು ನಡೆದಿತ್ತು.
ಉಳ್ಳಾಲ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿತ್ತು. ಜೂ.1 ರಂದು ಉಚ್ಚಿಲ ಬ್ರಿಡ್ಜ್ ಬಳಿ ಉಳ್ಳಾಲ ಠಾಣಾ ಪಿಎಸ್ ಐ ಪ್ರದೀಪ್ ಟಿ.ಆರ್ ಮತ್ತು ಸಿಬ್ಬಂದಿ ವಾಹನ ತಪಾಸಣೆ ನಡೆಸುತ್ತಿರುವಾಗ ಬೈಕ್ ಪತ್ತೆಯಾಗಿದೆ. ಬೈಕೊಂದು ನಂಬರ್ ಪ್ಲೇಟ್ ಇಲ್ಲದೇ ತೆರಳುತ್ತಿರುವುದನ್ನು ಗಮನಿಸಿ ಸಂಶಯಗೊಂಡು ತಡೆದು ದಾಖಲೆಗಳ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
Kshetra Samachara
02/06/2022 10:17 pm