ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಶಿಲ್ಪಾ ಸಾವು ಕೇಸ್‌- ಆರೋಪಿಗಳನ್ನು ಬಂಧಿಸಿ 10 ಲಕ್ಷ ರೂ. ಪರಿಹಾರ ನೀಡಿ: ವಿಹಿಂಪ ಆಗ್ರಹ

ಕುಂದಾಪುರ: ತಾಲೂಕಿನ ಉಪ್ಪಿನಕುದ್ರು ಗ್ರಾಮದ ಶಿಲ್ಪ ಎಂಬ ಹುಡುಗಿಯನ್ನು ಪ್ರೀತಿ ಪ್ರೇಮದ ನಾಟಕವನ್ನಾಡಿ ಸಾವಿಗೆ ಕಾರಣವಾದವನನ್ನು ಬಂಧಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಒತ್ತಾಯಿಸಿದೆ.

ಅಜೀಜ್ ಎಂಬಾತ ಅವಳ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿ ನಿರಂತರ 2-3 ವರ್ಷಗಳಿಂದ ದೈಹಿಕ ಮಾನಸಿಕ ಹಿಂಸೆಯನ್ನು ನೀಡಿದ್ದಾನೆ. ಇದನ್ನು ತಾಳಲಾರದೆ ಶಿಲ್ಪಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದಕ್ಕೆ ಕಾರಣ ಅಜೀಜ್ ದಂಪತಿ. ಇವರನ್ನು ತಕ್ಷಣ ಬಂಧಿಸಬೇಕು ಮತ್ತು ಈ ತನಿಖೆಯನ್ನು ಸಿಐಡಿಗೆ ಒಪ್ಪಿಸಬೇಕೆಂದು ವಿಹಿಂಪ ಮತ್ತು ಬಜರಂಗದಳ ಆಗ್ರಹಿಸಿದೆ. ಮಾತ್ರವಲ್ಲ, ಶಿಲ್ಪಾಳ ಕುಟುಂಬಕ್ಕೆ ಸರಕಾರ 10 ಲಕ್ಷ ರೂ. ಪರಿಹಾರ ನೀಡಬೇಕೆಂದು ವಿಶ್ವ ಹಿಂದು ಪರಿಷದ್ ನಾಯಕ ಶ್ರೀಧರ ಬಿಜೂರು ಹೇಳಿದ್ದಾರೆ.

Edited By : Manjunath H D
Kshetra Samachara

Kshetra Samachara

27/05/2022 06:56 pm

Cinque Terre

16 K

Cinque Terre

1

ಸಂಬಂಧಿತ ಸುದ್ದಿ