ಪಡುಬಿದ್ರಿ: ಉತ್ತರ ಕನ್ನಡ ಜಿಲ್ಲೆಯ ಯುವತಿ ಗೋದಾವರಿ (24) ಎಂಬ ಯುವತಿ ಹೆಜಮಾಡಿ ಗ್ರಾಮದ ಕೋಡಿಯಲ್ಲಿ ಬಾಡಿಗೆ ಮನೆ ಮಾಲಕರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರು ಕ್ವಾಲಿಟಿ ಮೆರೈನ್ ಫುಡ್ ಹೆಸರಿನ ಫ್ಯಾಕ್ಟರಿಯಲ್ಲಿ ಮೀನು ಕಟ್ಟಿಂಗ್ ಕೆಲಸ ಮಾಡಿಕೊಂಡಿದ್ದರು. ಹೆಜಮಾಡಿ ಕೋಡಿಯಲ್ಲಿ ಬಾಡಿಗೆ ಮನೆಯಲ್ಲಿ ಇತರ ಮೂವರು ಹುಡುಗಿಯರ ಜತೆ ವಾಸ ಮಾಡಿಕೊಂಡಿದ್ದರು. ಯಾವುದೋ ಕಾರಣಕ್ಕೆ ಜೀವನದಲ್ಲಿ ಜುಗುಪ್ಪೆಗೊಂಡು ಬಾವಿಗೆ ಹಾರಿ ಗೋದಾವರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ
ದಾಖಲಾಗಿದೆ.
Kshetra Samachara
27/05/2022 02:43 pm